Saturday, April 20, 2024
Homeರಾಜ್ಯನಡು ರಸ್ತೆಯಲ್ಲೇ ಯುವಕನ ಭೀಕರ ಕೊಲೆ

ನಡು ರಸ್ತೆಯಲ್ಲೇ ಯುವಕನ ಭೀಕರ ಕೊಲೆ

ಆನೇಕಲ್. ಫೆ. 25- ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲಿ ಯುವಕನನ್ನುಮಾರಕಾಸ್ತ್ರದಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸೂರ್ಯನಗರ ಪೋಲಿಸ್ ಠಾಣೆಯ ವ್ಯಾಪ್ತಿಯ ಮರಸೂರು ಗ್ರಾಮ ಬಳಿ ಇಂದು ಮುಂಜಾನೆ ನಡೆದಿದೆ.

ಜಯ್ ಕುಮಾರ್(27) ಕೊಲೆಯಾದ ಯುವಕನಾಗಿದ್ದು ಈತ ಕಳೆದ 2017ರಲ್ಲಿ ಮನೋಜ್ ಬಬ್ಲು ಎಂಬ ವ್ಯಕ್ತಿಯ ಕೊಲೆ ಕೇಸ್‍ನಲ್ಲಿ ಜೈಲು ಸೇರಿದ್ದು ಜಾಮೀನಿನ ಮೇಲೆ ಏಳು ತಿಂಗಳ ಹಿಂದೆ ಹೊರಗೆ ಬಂದಿದ್ದ. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಮೊಬೈಲ್ ಕರೆ ಮಾಡಿ ಮನೆಯಲ್ಲಿ ಮಲಗಿದ್ದವನನ್ನು ಹೊರ ಕರೆದು ನಂತರ ಸ್ವಲ್ಪ ದೂರ ಮಾತನಾಡುತ್ತಾ ಕರೆದುಕೊಂಡು ಹೋಗಿ ತಲೆಗೆ ಮಾರಕಾಸ್ತ್ರ ದಿಂದ ಹೊಡೆದಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಮೂರು ಪಕ್ಷಗಳಲ್ಲೂ ತಂತ್ರ-ಪ್ರತಿತಂತ್ರ

ಜಯ್ ಕುಮಾರ್ ಕುಸಿದು ಬೀಳುತ್ತಿದ್ದಂತೆ ಸುಮಾರು ನಾಲ್ಕೈದು ಮಂದಿ ದುಷ್ಕರ್ಮಿಗಳು ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಆಗಿದ್ದ ಮನೋಜ್ ಕಡೆಯವರು ಈ ಕೊಲೆ ಮಾಡಿಸಿದ್ದಾರೆ ಎಂದು ಜಯ್ ಪೋಷಕರು ದೂರಿದ್ದಾರೆ. ನಡು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಎಸ್.ಪಿ. ಮಲ್ಲಿಕಾರ್ಜುನ್ ಬಾಲದಂಡಿರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ಆನೇಕಲ್ ಭಾಗದಲ್ಲಿ ಮತ್ತೆ ಅಪರಾಧ ಚಟುವಟಿಕೆ ಹೆಚ್ಚಾಗುತ್ತಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ.

RELATED ARTICLES

Latest News