ಬೆಂಗಳೂರು,ಫೆ.26- ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೂ ವ್ಹಿಪ್ ನೀಡಿರುವುದಾಗಿ ರಾಜ್ಯಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ. ಖಾಸಗಿ ಹೋಟೆಲ್‍ನಲ್ಲಿ ಎಲ್ಲಾ ಶಾಸಕರು ರಾತ್ರಿ ಉಳಿದುಕೊಳ್ಳಲಿದ್ದು, ನಾಳೆ ಬೆಳಿಗ್ಗೆ ಶಾಸಕರೆಲ್ಲಾ ಹೋಟೆಲ್‍ನಿಂದ ವಿಧಾನಸೌಧಕ್ಕೆ ಬಸ್ಸಿನಲ್ಲಿ ಬಂದು ರಾಜ್ಯಸಭೆ ಚುನಾವಣೆಗೆ ಮತ ಚಲಾಯಿಸುತ್ತೇವೆ.
ಫೆ.29ಕ್ಕೆ ಬಿಜೆಪಿ ಮೊದಲ ಪಟ್ಟಿ: ರಾಜ್ಯದ 10 ಕ್ಷೇತ್ರ ಸೇರಿ 150 ಅಭ್ಯರ್ಥಿಗಳು ಫೈನಲ್
ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಮತದಾನ ಮಾಡುವ ಕುರಿತಂತೆ ತರಬೇತಿ ನೀಡಲಾಗುತ್ತದೆ. ಕಾಂಗ್ರೆಸ್‍ನಲ್ಲಿ ಅಡ್ಡ ಮತದಾನದ ಭೀತಿಯಿಲ್ಲ. ಒಂದು ವೇಳೆ ಅಡ್ಡಮತದಾನವಾದರೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುತ್ತದೆ. ಹೀಗಾಗಿ ಯಾರೂ ಅಡ್ಡಮತದಾನ ಮಾಡುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.