Friday, November 22, 2024
Homeರಾಷ್ಟ್ರೀಯ | National8 ಶಾಸಕರನ್ನು ಅನರ್ಹಗೊಳಿಸಿದ ಆಂಧ್ರ ಸ್ಪೀಕರ್

8 ಶಾಸಕರನ್ನು ಅನರ್ಹಗೊಳಿಸಿದ ಆಂಧ್ರ ಸ್ಪೀಕರ್

ಅಮರಾವತಿ,ಫೆ.27- ಆಂಧ್ರಪ್ರದೇಶ ವಿಧಾನಸಭೆಯ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರು ಪಕ್ಷಾಂತರದ ವಿರುದ್ಧ ನಿರ್ಣಾಯಕ ನಿಲುವು ತೆಗೆದುಕೊಂಡಿದ್ದು, 8 ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸಲ್ಲಿಸಿದ ಅರ್ಜಿಯ ಮೇರೆಗೆ ಮುಖ್ಯಮಂತ್ರಿ ಕಚೇರಿ ಅಧಿಕೃತ ಪ್ರಕಟಣೆಯ ಪ್ರಕಾರ, ಅನರ್ಹಗೊಂಡ ಸದಸ್ಯರಲ್ಲಿ ಆನಂ ರಾಮನಾರಾಯಣ ರೆಡ್ಡಿ, ಮೇಕಪತಿ ಚಂದ್ರಶೇಖರ ರೆಡ್ಡಿ, ಕೋಟಂ ರೆಡ್ಡಿ ಶ್ರೀಧರ್ ರೆಡ್ಡಿ ಮತ್ತು ಉಂಡವಳ್ಳಿ ಶ್ರೀದೇವಿ ಸೇರಿದ್ದಾರೆ.

ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಪ್ರಕಾರ ಉಲ್ಲೇಖಿಸಲಾದ ಶಾಸಕರ ವಿರುದ್ಧ ವೈಎಸ್‍ಆರ್‍ಸಿಪಿಯ ಅರ್ಜಿಯಲ್ಲಿ ಸಲ್ಲಿಸಲಾದ ಆರೋಪಗಳು ಮತ್ತು ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅನರ್ಹತೆ ನಿರ್ಧಾರಕ್ಕೆ ಬರಲಾಗಿದೆ.

ನ್ಯೂಜಿಲೆಂಡ್ ವೇಗದ ಬೌಲರ್ ನೀಲ್ ವ್ಯಾಗ್ನರ್ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಣೆ

ಅನರ್ಹಗೊಂಡ ಸದಸ್ಯರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಪಕ್ಷದ ತತ್ವಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೇ, ತೆಲುಗು ದೇಶಂ ಪಕ್ಷ (ಟಿಡಿಪಿ) ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಮದ್ದಲಗಿರಿ, ಕರಣಂ ಬಲರಾಮ, ವಲ್ಲಭನೇನಿ ವಂಶಿ ಮತ್ತು ವಾಸುಪಲ್ಲಿ ಗಣೇಶ್ ಅನರ್ಹಗೊಂಡಿದ್ದಾರೆ. ಟಿಡಿಪಿ ಕೂಡ ತನ್ನ ಶಾಸಕರ ವಿರುದ್ಧ ಇದೇ ಆರೋಪ ಮಾಡಿದೆ.

RELATED ARTICLES

Latest News