ಬೆಂಗಳೂರು, ಅ.6- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೋಮುಗಲಭೆ ತಂದಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ. ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಣತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿದೇಶ ಪ್ರವಾಸದ ಬಗ್ಗೆ ಕಿಡಿ ಕಾರಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಸಮರ್ಥ ಮಂತ್ರಿಗಳಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದೆ. ಗೂಂಡಾಗಳು, ಜಿಹಾದಿಗಳು ಬೀದಿಗಿಳಿದು ಕಲ್ಲು ತೂರುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಸೇರಿ ಅಪರಾಧ ಪ್ರಕರಣಗಳ ಸಂಖ್ಯೆಯೂ ಏರುತ್ತಿದೆ. ಯಥಾ ಮುಖ್ಯಮಂತ್ರಿ ತಥಾ ಮಂತ್ರಿ ಎನ್ನುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವತಘ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದೆ.
ಉದ್ಯಮಿಯಿಂದ 2 ಕೋಟಿ ಲಂಚ ಪಡೆದಿದ್ದರಂತೆ ಸಂಜಯ್‍ಸಿಂಗ್
ಇಲ್ಲಿ ಊರಿಗೆ ಊರೇ ಹೊತ್ತಿ ಉರಿಯುತ್ತಿದ್ದರೆ, ಗೃಹ ಸಚಿವರು ವಿದೇಶದಲ್ಲಿ ಬೆಂಕಿ ಕಾಯಿಸಿಕೊಳ್ಳಲು ಹೋಗಿದ್ದಾರೆ ಎಂದು ಪ್ರತಿಪಕ್ಷ ಆರೋಪ ಮಾಡಿದೆ. ಮತ್ತೊಂದು ಟ್ವೀಟ್‍ನಲ್ಲಿ ಬಿಜೆಪಿ, ಕಾಂಗ್ರೆಸ್ಸಿನ ಗೂಂಡಾ ರಾಜ್ಯದ ಕನಸು ನನಸಾಗುವತ್ತ..! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದು ಕಡೆ ಕರ್ನಾಟಕ ಭಯೋತ್ಪಾದಕರು, ಜಿಹಾದಿಗಳ ಅಡಗುತಾಣವಾದರೆ, ಮತ್ತೊಂದೆಡೆ ರಾಜ್ಯದಲ್ಲಿ ದಲಿತರು, ಹಿಂದುಳಿದವರ ಮೇಲೆ ಹಲ್ಲೇ, ದೌರ್ಜನ್ಯ, ದರೋಡೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದೆ.
ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಗೂಂಡಾಗಳು, ಸಮಾಜಘಾತುಕರನ್ನು ಕಾಂಗ್ರೆಸ್ ಕಾರ್ಯಕರ್ತರು, ಅಮಾಯಕರು ಎನ್ನುವ ಕಾರಣದಿಂದಲೇ ಈ ಪರಿ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.
ಯಾವುದೇ ಸಮಯದಲ್ಲಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ
ಶಿವಮೊಗ್ಗದಲ್ಲಿ ಹಿಂದೂಗಳ ಬದಲು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಿದ್ದರೆ ಕರ್ನಾಟಕ ಕಾಂಗ್ರೆಸ್ ಕೈಗೊಳ್ಳುತ್ತಿದ್ದ ಸಂಭವನೀಯ ನಿರ್ಧಾರಗಳು ಎಂದು ಟ್ವೀಟ್ ಮಾಡಿರುವ ಬಿಜೆಪಿ ಪಟ್ಟಿಯೊಂದನ್ನು ನೀಡಿದೆ.
- ಬಿಜೆಪಿ ನಾಯಕರೇ ಮಾಡಿದ್ದಾರೆಂದು ತಲೆಗೆ ಕಟ್ಟುವುದು..!
- ಹಿಂದೂ ಭಯೋತ್ಪಾದನೆ ಶುರುವಾಗಿದೆಯೆಂದು ಬೊಬ್ಬೆ ಹಾಕುವುದು..!
- ಸಿದ್ದರಾಮಯ್ಯ ಅವರಿಂದ ಕೂಡಲೇ ಸ್ಥಳಕ್ಕೆ ಭೇಟಿ, ಪರಿಹಾರ ಘೋಷಣೆ..!
- ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರ ಟಾಸ್ಕ್ ಫೋರ್ಸ್ ಸ್ಥಾಪನೆ..!
- ಶಿವಮೊಗ್ಗ ಘಟನೆ ನಡೆಯಲು ಹಿಂದೂಗಳೇ ಪ್ರಚೋದನೆ ನೀಡಿದ್ದಾರೆಂದು ಪುಕಾರು..!
- ಅಲ್ಪಸಂಖ್ಯಾತರ ಮನೆಗಳ ಮರು ನಿರ್ಮಾಣಕ್ಕೆ 5 ಲಕ್ಷ ಪರಿಹಾರ ಘೋಷಣೆ..!
- ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ನಿಂತಿದೆ ಎಂದು ಬೆನ್ನುತಟ್ಟುವ ಕೆಲಸ..!
¿ವಾಸ್ತವದಲ್ಲಿ ಜಿಹಾದಿಗಳಿಂದ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆಯೇ ಹೊರತು, ಹಿಂದೂಗಳಿಂದ ಜಿಹಾದಿಗಳ ಮೇಲೆ ದಾಳಿ ನಡೆದಿಲ್ಲ. ಜಿಹಾದಿಗಳನ್ನು ಅಮಾಯಕರೆನ್ನಲು, ಕೋಮುಗಲಭೆ ನಡೆಯಲು ಕಾರಣ ಕಾಂಗ್ರೆಸ್.. ಕಾಂಗ್ರೆಸ್.. ಕಾಂಗ್ರೆಸ್..! ಎಂದು ಬಿಜೆಪಿ ಟ್ವೀಟ್‍ನಲ್ಲಿ ಆರೋಪ ಮಾಡಿದೆ.