Homeರಾಷ್ಟ್ರೀಯಟಿವಿ ವಾಹಿನಿಗಳ ಗಂಟೆಗೆ ಗರಿಷ್ಠ 12 ನಿಮಿಷಗಳ ಜಾಹೀರಾತು ಮಿತಿ ರದ್ದುಪಡಿಸಲು ಮುಂದಾದ ಕೇಂದ್ರ ಸರ್ಕಾರ

ಟಿವಿ ವಾಹಿನಿಗಳ ಗಂಟೆಗೆ ಗರಿಷ್ಠ 12 ನಿಮಿಷಗಳ ಜಾಹೀರಾತು ಮಿತಿ ರದ್ದುಪಡಿಸಲು ಮುಂದಾದ ಕೇಂದ್ರ ಸರ್ಕಾರ

Centre Drops 12-Minute-Per-Hour Advertisement Cap On TV Channels

ನವದೆಹಲಿ,ಆ.15- ದೂರದರ್ಶನ ವಾಹಿನಿಗಳು ಪ್ರತಿ ಗಂಟೆಗೆ ಗರಿಷ್ಠ 12 ನಿಮಿಷಗಳಷ್ಟೇ ಜಾಹೀರಾತು ಪ್ರಸಾರ ಮಾಡಬೇಕು ಎಂಬ ದೀರ್ಘಕಾಲದ ಮಿತಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಈ ನಿರ್ಧಾರವನ್ನು ಪ್ರಸಾರ ಉದ್ಯಮದಲ್ಲಿ ಬದಲಾಗಿರುವ ಮಾರುಕಟ್ಟೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಹಾಗೂ ಟಿವಿ ಮತ್ತು ಡಿಜಿಟಲ್‌ ಮಾಧ್ಯಮಗಳ ನಡುವೆ ನ್ಯಾಯಯುತ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಕ್ರಮವೆಂದು ಸರ್ಕಾರ ವಿವರಿಸಿದೆ.

ಸರ್ಕಾರದ ಪ್ರಕಾರ, 12 ನಿಮಿಷಗಳ ಜಾಹೀರಾತು ಅವಧಿಯ ಮಿತಿಯನ್ನು 2006ರಲ್ಲಿ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌್ಸ ನಿಯಮಗಳು, 1994ರ ಅಡಿಯಲ್ಲಿ ಜಾರಿಗೆ ತರಲಾಗಿತ್ತು.ಆ ಸಂದರ್ಭದಲ್ಲಿ ದೇಶದಲ್ಲಿ ಸುಮಾರು 62 ಟಿವಿ ವಾಹಿನಿಗಳಷ್ಟೇ ಇದ್ದವು. ಆದರೆ ಈಗ 900ಕ್ಕೂ ಹೆಚ್ಚು ವಾಹಿನಿಗಳು ಕಾರ್ಯನಿರ್ವಹಿಸುತ್ತಿದ್ದು, ಟಿವಿ ಪ್ರಸಾರದ ಮಾರುಕಟ್ಟೆಯ ಸ್ವರೂಪವೇ ಸಂಪೂರ್ಣವಾಗಿ ಬದಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅನಲಾಗ್‌ ಯುಗದಿಂದ ಡಿಜಿಟಲ್‌ ಯುಗಕ್ಕೆ ಬದಲಾವಣೆ :
2006ರ ಪರಿಸ್ಥಿತಿಯಲ್ಲಿ ಕೇಬಲ್‌ ಟಿವಿ ಮುಖ್ಯ ವಿತರಣಾ ವೇದಿಕೆಯಾಗಿತ್ತು. ಅನಲಾಗ್‌ ತಂತ್ರಜ್ಞಾನ ಮತ್ತು ಸೀಮಿತ ಪ್ರಸಾರ ಸಾಮರ್ಥ್ಯದಿಂದಾಗಿ ಗ್ರಾಹಕರಿಗೆ ಲಭ್ಯವಿದ್ದ ವಾಹಿನಿಗಳ ಆಯ್ಕೆಯೂ ಕಡಿಮೆಯಾಗಿತ್ತು. ಹೀಗಾಗಿ ಜಾಹೀರಾತುಗಳ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ವೀಕ್ಷಕರ ಹಿತವನ್ನು ಕಾಪಾಡುವುದು ನಿಯಂತ್ರಣದ ಪ್ರಮುಖ ಉದ್ದೇಶವಾಗಿತ್ತು.

ಆದರೆ ನಂತರದ ವರ್ಷಗಳಲ್ಲಿ ಕೇಬಲ್‌ ಟಿವಿ ವಲಯ ಸಂಪೂರ್ಣ ಡಿಜಿಟಲೀಕರಣಗೊಂಡಿದೆ. ಡಿಟಿಎಚ್‌‍, ಡಿಜಿಟಲ್‌ ಕೇಬಲ್‌‍, ಏಐಖ ಹಾಗೂ ಐ್ಖ ಸೇರಿದಂತೆ ಹಲವು ವಿತರಣಾ ವ್ಯವಸ್ಥೆಗಳು ವೀಕ್ಷಕರಿಗೆ ನೂರಾರು ವಾಹಿನಿಗಳನ್ನು ಒದಗಿಸುತ್ತಿವೆ. ಸರ್ಕಾರದ ಅಂದಾಜಿನ ಪ್ರಕಾರ, ಹಲವು ವೇದಿಕೆಗಳಲ್ಲಿ ಈಗ 300ರಿಂದ 500 ಅಥವಾ ಅದಕ್ಕಿಂತ ಹೆಚ್ಚಿನ ವಾಹಿನಿಗಳ ಆಯ್ಕೆಯೂ ಲಭ್ಯವಿದೆ. ಹೀಗಾಗಿ 2006ರಲ್ಲಿ ಇದ್ದ ಮಾರುಕಟ್ಟೆ ಪರಿಸ್ಥಿತಿ ಮತ್ತು 2026ರ ಮಾರುಕಟ್ಟೆ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸ ಉಂಟಾಗಿದೆ.

12 ನಿಮಿಷಗಳ ನಿಯಮದ ಹಿನ್ನೆಲೆ ಏನು? :
ಜಾಹೀರಾತು ಅವಧಿಯ ನಿಯಂತ್ರಣ ಹೊಸ ವಿಚಾರವಲ್ಲ. ಗ್ರಾಹಕರ ವೀಕ್ಷಣಾ ಅನುಭವಕ್ಕೆ ಅತಿಯಾದ ಜಾಹೀರಾತುಗಳು ತೊಂದರೆ ಉಂಟುಮಾಡಬಹುದು ಎಂಬ ಕಾರಣದಿಂದ ನಿಯಂತ್ರಣ ವ್ಯವಸ್ಥೆ ರೂಪುಗೊಂಡಿತ್ತು.ಟೆಲಿಕಾಂ ನಿಯಂತ್ರಣ ಪ್ರಾಧಿಕಾರ-2012ರಲ್ಲಿ ‘Standards of Quality of Service (Duration of Advertisements in Television Channels) Regulations’ ಜಾರಿಗೊಳಿಸಿತ್ತು.

2013ರ ತಿದ್ದುಪಡಿಯ ನಂತರವೂ ಒಂದು ಗಂಟೆಯಲ್ಲಿ ಗರಿಷ್ಠ 12 ನಿಮಿಷಗಳ ಜಾಹೀರಾತು ಅವಧಿಯ ನಿಯಮವನ್ನು ಸ್ಪಷ್ಟವಾಗಿ ಮುಂದುವರಿಸಲಾಗಿತ್ತು.ಆ ಕಾಲದಲ್ಲಿ TRAI ನಡೆಸಿದ ಅಧ್ಯಯನಗಳಲ್ಲಿ, ವಿಶೇಷವಾಗಿ ಪ್ರೈಮ್‌ಟೈಮ್‌ನಲ್ಲಿ ಕೆಲವು ವಾಹಿನಿಗಳಲ್ಲಿ ಜಾಹೀರಾತುಗಳ ಪ್ರಮಾಣ ಅನುಮತಿಸಲಾದ ಮಿತಿಗಿಂತ ಹೆಚ್ಚಾಗುತ್ತಿರುವ ಬಗ್ಗೆ ಗ್ರಾಹಕರ ದೂರುಗಳು ವ್ಯಕ್ತವಾಗಿದ್ದವು. 2012ರ TRAI ದಾಖಲೆಗಳ ಪ್ರಕಾರ, ಕೆಲವು ಪ್ರಮುಖ ಸುದ್ದಿ ವಾಹಿನಿಗಳ ಪ್ರೈಮ್‌ಟೈಮ್‌ ಪ್ರಸಾರದ ಸುಮಾರು 35 ಪ್ರತಿಶತ ಸಮಯ ಜಾಹೀರಾತುಗಳಿಗೆ ಹೋಗುತ್ತಿತ್ತು ಎಂಬ ಅಧ್ಯಯನವೂ ಉಲ್ಲೇಖವಾಗಿತ್ತು.

ಈಗ ಏಕೆ ನಿಯಮ ಬದಲಾವಣೆ? :
ಕೇಂದ್ರ ಸರ್ಕಾರದ ವಾದದ ಪ್ರಮುಖ ಅಂಶವೇ ಮಾರುಕಟ್ಟೆಯಲ್ಲಿನ ಸ್ಪರ್ಧೆಯ ಸ್ವರೂಪ ಬದಲಾಗಿದೆ ಎಂಬುದು.ಟಿವಿ ವಾಹಿನಿಗಳು ಈಗ ಪರಸ್ಪರ ಮಾತ್ರ ಸ್ಪರ್ಧಿಸುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಹಾಗೂ ಇತರ ಡಿಜಿಟಲ್‌ ವೇದಿಕೆಗಳು ವೀಕ್ಷಕರ ಸಮಯ ಮತ್ತು ಜಾಹೀರಾತು ಆದಾಯಕ್ಕಾಗಿ ಟಿವಿಯೊಂದಿಗೆ ನೇರವಾಗಿ ಸ್ಪರ್ಧಿಸುತ್ತಿವೆ. ಡಿಜಿಟಲ್‌ ಮಾಧ್ಯಮದಲ್ಲಿ ಟಿವಿಯಂತೆಯೇ ಒಂದು ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿಯ ನಿಯಂತ್ರಣ ಇಲ್ಲ. ಹೀಗಾಗಿ ಟಿವಿ ವಾಹಿನಿಗಳಿಗೆ ಮಾತ್ರ ಕಠಿಣ ಜಾಹೀರಾತು ಮಿತಿ ವಿಧಿಸುವುದು ಅವುಗಳನ್ನು ಡಿಜಿಟಲ್‌ ವೇದಿಕೆಗಳಿಗಿಂತ ಸ್ಪರ್ಧಾತಕವಾಗಿ ಹಿಂದುಳಿಸಬಹುದು ಎಂಬುದು ಸರ್ಕಾರದ ನಿಲುವು.

RELATED ARTICLES
spot_img

Latest News