Friday, April 11, 2025
Homeರಾಜ್ಯBIG NEWS : ರಾಮೇಶ್ವರಂ ಕೆಫೆ ಸ್ಫೋಟಿಸಿದ ಬಾಂಬರ್ ಗುರುತು ಪತ್ತೆಹಚ್ಚಿದ ಎನ್‍ಐಎ

BIG NEWS : ರಾಮೇಶ್ವರಂ ಕೆಫೆ ಸ್ಫೋಟಿಸಿದ ಬಾಂಬರ್ ಗುರುತು ಪತ್ತೆಹಚ್ಚಿದ ಎನ್‍ಐಎ

ಬೆಂಗಳೂರು, ಮಾ. 11- ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಬಾಂಬರ್ ಯಾರೆಂಬುದು ಎನ್‍ಐಎನ್‍ಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಐಎ ಅಧಿಕಾರಿಗಳು ಹೈದ್ರಾಬಾದ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಬಾಂಬರ್‍ಗಾಗಿ ಶೋಧ ನಡೆಸುತ್ತಿದ್ದಾರೆ.

ನಿನ್ನೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲ್ಬುರ್ಗಿ, ರಾಯಚೂರು ಸೇರಿದಂತೆ ಮುಂತಾದ ಜಿಲ್ಲೆಗಳಲ್ಲಿ ಆರೋಪಿಗಾಗಿ ಶೋಧ ನಡೆಸಿದ್ದಾರೂ ಪತ್ತೆಯಾಗಲಿಲ್ಲ. ಇದೀಗ ಹೈದ್ರಾಬಾದ್ ಸೇರಿದಂತೆ ದೇಶದಾದ್ಯಂತ ಆರೋಪಿ ಬಂಧನಕ್ಕಾಗಿ ಎನ್‍ಐಎ ಅಧಿಕಾರಿಗಳು ಹಗಲಿರುಳು ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News