Homeರಾಜ್ಯರಾಜ್ಯದಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ಪೂರ್ಣ, ಬೆಂಗಳೂರಿನ ಅರ್ಧದಷ್ಟು ಮತದಾರರು ASDDO ಪಟ್ಟಿಗೆ ಸೇರ್ಪಡೆ

ರಾಜ್ಯದಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ಪೂರ್ಣ, ಬೆಂಗಳೂರಿನ ಅರ್ಧದಷ್ಟು ಮತದಾರರು ASDDO ಪಟ್ಟಿಗೆ ಸೇರ್ಪಡೆ

SIR process complete in the state, half of Bengaluru voters included in ASDDO list

ಬೆಂಗಳೂರು, ಅ. 18- ರಾಜ್ಯದಲ್ಲಿ ಜೂನ್‌ 29ರಿಂದ ಆಗಸ್ಟ್‌ 17ರವರೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ಪ್ರಕ್ರಿಯೆ ಮುಕ್ತಾಯಗೊಂಡಿದೆ. ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಜ್ಯಾದ್ಯಂತ 5.54 ಕೋಟಿ ಮತದಾರರ ಎನ್ಯೂಮರೇಷನ್‌ ಫಾರಂ ವಿತರಣೆ ಪೂರ್ಣಗೊಂಡಿದ್ದು, 4.46 ಕೋಟಿಗೂ ಅಧಿಕ ಫಾರ್ಮ್‌ಗಳ ಡಿಜಿಟಲೀಕರಣವಾಗಿದೆ.

ರಾಜ್ಯದಲ್ಲಿ ಒಟ್ಟು 5,54,32,314 ಫಾರಂ ವಿತರಿಸಲಾಗಿದ್ದು, ಈ ಪೈಕಿ 4,46,00,369 ಫಾರ್ಮ್‌ಗಳು ಡಿಜಿಟಲೀಕರಣಗೊಂಡಿವೆ. ಅಂದರೆ ಶೇ.80.46ರಷ್ಟು ಮತದಾರರ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಉಳಿದ ಮತದಾರರ ಪೈಕಿ 1,08,31,945 ಮಂದಿಯನ್ನು ಎಎಸ್‌‍ಡಿಡಿಒ ಪಟ್ಟಿಗೆ ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಶೇ.19.54ರಷ್ಟಾಗಿದೆ. ಪಟ್ಟಿಯಲ್ಲಿ 15,28,985 ಮಂದಿ ಪತ್ತೆಯಾಗದ ಅಥವಾ ಹಾಜರಿಲ್ಲದವರು, 65,61,607 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,38,839 ಮಂದಿ ಮೃತಪಟ್ಟವರು, 7,07,792 ಮಂದಿ ಈಗಾಗಲೇ ಮತ್ತೊಂದು ಕಡೆ ನೋಂದಣಿಯಾಗಿರುವವರು ಹಾಗೂ 3,94,722 ಮಂದಿಯನ್ನು ಇತರೆ ವಿಭಾಗಗಳಲ್ಲಿ ಗುರುತಿಸಲಾಗಿದೆ.

ನಗರದಲ್ಲಿ 47.15 ಲಕ್ಷ ಮತದಾರರು ಅನರ್ಹ; ರಾಜ್ಯದ ಸರಾಸರಿ ಶೇ.19.54ಕ್ಕೆ ಹೋಲಿಸಿದರೆ ಬೆಂಗಳೂರಿನ ಹಲವು ಭಾಗಗಳಲ್ಲಿ ಎಎಸ್‌‍ಡಿಡಿಒ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ. ಹೀಗಾಗಿ ಬೆಂಗಳೂರಿನ ಅರ್ಧದಷ್ಟು ಜನರ ಹೆಸರು ಕರಡು ಮತದಾರರ ಪಟ್ಟಿಯಿಂದ ನಾಪತ್ತೆಯಾಗುವ ಸಾಧ್ಯತೆಗಳಿವೆ.

ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರಿದ್ದು ಇವರ ಪೈಕಿ 47.15 ಲಕ್ಷಕ್ಕೂ ಹೆಚ್ಚು ಮತದಾರರು ಎಎಸ್‌‍ಡಿಡಿಒ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.ಬೆಂಗಳೂರು ದಕ್ಷಿಣದಲ್ಲಿ ಶೇ.49.61, ಸೆಂಟ್ರಲ್‌ನಲ್ಲಿ ಶೇ.45.84, ನಾರ್ತ್‌ನಲ್ಲಿ ಶೇ.45.36 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.42.94ರಷ್ಟು ಮತದಾರರನ್ನು ಪಟ್ಟಿಗೆ ಗುರುತಿಸಲಾಗಿದೆ.

ಇದಕ್ಕೆ ವಿರುದ್ಧವಾಗಿ, ಫಾರ್ಮ್‌ಗಳ ಡಿಜಿಟಲೀಕರಣದಲ್ಲೂ ಬೆಂಗಳೂರಿನ ಭಾಗಗಳು ಹಿಂದುಳಿದಿವೆ. ದಕ್ಷಿಣದಲ್ಲಿ ಶೇ.50.39, ಸೆಂಟ್ರಲ್‌ನಲ್ಲಿ ಶೇ.54.16, ನಾರ್ತ್‌ನಲ್ಲಿ ಶೇ.54.64 ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.57.06ರಷ್ಟು ಡಿಜಿಟಲೀಕರಣವಾಗಿದೆ.ರಾಜ್ಯದಲ್ಲಿ ಉಡುಪಿ ಜಿಲ್ಲೆ ಶೇ.94.04ರಷ್ಟು ಡಿಜಿಟಲೀಕರಣದೊಂದಿಗೆ ಅಗ್ರಸ್ಥಾನದಲ್ಲಿದೆ.

ಹಾವೇರಿ ಶೇ.91.38, ಉತ್ತರ ಕನ್ನಡ ಶೇ.91.30 ಹಾಗೂ ದಕ್ಷಿಣ ಕನ್ನಡ ಶೇ.91.26ರಷ್ಟು ಡಿಜಿಟಲೀಕರಣ ಸಾಧಿಸಿವೆ.ಆನ್‌ಲೈನ್‌ ಮೂಲಕ 7.11 ಲಕ್ಷ ಫಾರ್ಮ್‌ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮತದಾರರು ಆನ್‌ಲೈನ್‌‍ ಮೂಲಕವೂ ಫಾರ್ಮ್‌ ಸಲ್ಲಿಸಿದ್ದಾರೆ. ಒಟ್ಟು 7,11,712 ಅನ್ನು ಮತದಾರರೇ ಆನ್‌ಲೈನ್‌ನಲ್ಲಿ ಸಲ್ಲಿಸಿದ್ದು, ಇದು ಶೇ.1.28ರಷ್ಟಾಗಿದೆ.ಹೊಸ ಮತದಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಅಕ್ಟೋಬರ್‌ 1, 2026ಕ್ಕೆ 18 ವರ್ಷ ಪೂರ್ಣಗೊಳ್ಳುವವರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ನೀಡಲಾಗಿದೆ. ಅರ್ಹರು ಫಾರಂ-6 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಜೂನ್‌ 16ರಿಂದ ಆಗಸ್ಟ್‌ 16ರವರೆಗೆ ಒಟ್ಟು 13,32,348 ಅರ್ಜಿಗಳು ಸ್ವೀಕಾರವಾಗಿವೆ. ಇದರಲ್ಲಿ ಫಾರಂ-6 ಅಡಿ 4,28,679, ಫಾರಂ-6ಎ ಅಡಿ 3,710, ಫಾರಂ-7 ಅಡಿ 31,554 ಹಾಗೂ ಫಾರಂ-8 ಅಡಿ 8,68,405 ಅರ್ಜಿಗಳು ಬಂದಿವೆ.

ಪಟ್ಟಿಯ ಬಗ್ಗೆ ಮತದಾರರಿಗೆ ಅವಕಾಶ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸಲಾಗಿದ್ದು, ವೆಬ್‌ಸೈಟ್‌ಗಳಲ್ಲಿಯೂ ಪರಿಶೀಲನೆಗೆ ಲಭ್ಯವಿದೆ. ತಮ್ಮ ಹೆಸರು ತಪ್ಪಾಗಿ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ, ಮತದಾರರು ಅಥವಾ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.ಅಲ್ಲದೆ, ಮತದಾರರು ತಮ್ಮ ವಿವರಗಳನ್ನು ಕರ್ನಾಟಕದ ಅಧಿಕೃತ ವೆಬ್‌ಸೈಟ್‌‍ ಮೂಲಕವೂ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಕೇಂದ್ರ ಚುನಾವಣಾ ಅಯೋಗ ಮಾಹಿತಿ ನೀಡಿದೆ.

RELATED ARTICLES
spot_img

Latest News