ಬೆಂಗಳೂರು,ಮಾ.15- ಇಲಾಖಾ ಮುಂಬಡ್ತಿ ಸಮಿತಿ ಅಧ್ಯಕ್ಷರ ಅನುಮೋದನೆ ಪಡೆಯದೇ ಎಸ್‍ಇ ಹುದ್ದೆಗೆ ಮುಂಬಡ್ತಿ ನೀಡಿರುವ ಮತ್ತು ಅರ್ಹತೆ ಇಲ್ಲದಿದ್ದರೂ ಅದೇ ವ್ಯಕ್ತಿಗೆ ಸಿಇ ಹುದ್ದೆಗೆ ಮುಂಬಡ್ತಿ ನೀಡಿರುವ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ಸಮತಿ ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಇಬ್ಬರು ಅಭಿಯಂತರರಿಗೆ ನಿಯಮ ಮೀರಿ ಮುಂಬಡ್ತಿ ನೀಡಿರುವ ಶ್ರೀಧರ್, ಯೋಗೇಶ್ ಹಾಗೂ ಲಕ್ಷ್ಮೀಸಾಗರ್ ಎಂಬುವವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಎನ್.ಆರ್.ರಮೇಶ್ ಅವರು ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಅ„ೀಕ್ಷಕ ಅಭಿಯಂತರರಾಗಿ ಮತ್ತು ಪ್ರಭಾರಿ ಮುಖ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ವಿ ರಾಜೇಶ್ ಅವರು ಮೂಲತಃ ಬಿಇ (ಮೆಕ್ಯಾನಿಕಲ್‍ವಿದ್ಯಾರ್ಹತೆ ಪಡೆದವರಾಗಿರುತ್ತಾರೆ.
ಆರ್ಥಿಕವಾಗಿ ಬಹಳ ಪ್ರಭಾವಿಗಳಾಗಿರುವ ರಾಜೇಶ್ ಹಾಗೂ ರಾಘವೇಂದ್ರ ಪ್ರಸಾದ್ ಎಂಬ ಅಧಿಕಾರಿಗಳಿಗೆ ಕಾರ್ಯಪಾಲಕ ಅಭಿಯಂತರರ ಹುದ್ದೆಯಿಂದ ಅಧೀಕ್ಷಕ ಅಭಿಯಂತರ ಹುದ್ದೆಗೆ ಮುಂಬಡ್ತಿ ನೀಡುವ ಸಲುವಾಗಿ ಆಡ್‍ಓಕ್ ಸಭೆ ನಡೆಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆದರೂ, ರಾಜೇಶ್ ಮತ್ತು ರಾಘವೇಂದ್ರ ಪ್ರಸಾದ್ ಅವರುಗಳಿಗೆ ಕಾರ್ಯಪಾಲಕ ಅಭಿಯಂತರರ ಹುದ್ದೆಯಿಂದ ಅಧೀಕ್ಷಕ ಅಭಿಯಂತರ ಹುದ್ದೆಗೆ ಪದೋನ್ನತಿ ನೀಡುವ ನಿರ್ಣಯವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿರುತ್ತದೆ. ಆದರೆ ಈ ನಿರ್ಣಯ ನೂರಕ್ಕೆ ನೂರರಷ್ಟು ಕಾನೂನು ಬಾಹಿರ ನಿರ್ಣಯವಾಗಿದ್ದು, ಇಲಾಖೆ ಮುಂಬಡ್ತಿ ಸಮಿತಿಯ ಅಧ್ಯಕ್ಷರು ಈ ನಿರ್ಣಯಕ್ಕೆ ತಮ್ಮ ಅನುಮೋದನೆಯನ್ನೇ ನೀಡಿರುವುದಿಲ್ಲ ಎನ್ನುವುದನ್ನು ಅವರು ಉಲ್ಲೇಖಿಸಿದ್ದಾರೆ.
ಬಿಬಿಎಂಪಿಯ ಅಧೀಕ್ಷಕ ಅಭಿಯಂತರರು ಮತ್ತು ಮುಖ್ಯ ಅಭಿಯಂತರರ ಹುದ್ದೆಗಳಿಗೆ ನಿಯೋಜನೆಗೊಳ್ಳಬೇಕಾದ ಅಧಿಕಾರಿಯು ಬಿಇ(ಸಿವಿಲ್) ವಿದ್ಯಾರ್ಹತೆನ್ನು ಕಡ್ಡಾಯವಾಗಿ ಪಡೆದಿರಬೇಕೆಂಬ ನಿಯಮವಿದ್ದರೂ ಬಿಇ ಮೆಕ್ಯಾನಿಕಲ್ ವಿದ್ಯಾರ್ಹತೆ ಪಡೆದಿರುವ ರಾಜೇಶ್ ಅವರಿಗೆ ಕಾನೂನುಬಾಹಿರವಾಗಿ ಕಾರ್ಯಪಾಲಕ ಅಭಿಯಂತರರ ಹುದ್ದೆಯಿಂದ ಅ„ೀಕ್ಷಕ ಅಭಿಯಂತ ರ ಹದ್ದೆಗೆ ಮುಂಬಡ್ತಿ ನೀಡಿದ ಕೇವಲ 17 ತಿಂಗಳಲ್ಲಿ ಮತ್ತೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮುಖ್ಯ ಅಭಿಯಂತರರ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ.
ಈ ಎರಡು ಕಾನೂನುಬಾಹಿರ ಮುಂಬಡ್ತಿ ನೀಡಿರುವ ಡಿಬಿಸಿಯ ಮೂವರು ಸದಸ್ಯರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಂದಿನ ಉಪ ಆಯುಕ್ತ (ಆಡಳಿತ) ರವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂಪೂರ್ಣ ದಾಖಲೆಗಳ ಸಹಿತ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳನ್ನು ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೀಡಲಾಗಿದೆ ಎಂದು ರಮೇಶ್ ತಿಳಿಸಿದ್ದಾರೆ.