Friday, November 22, 2024
Homeರಾಜ್ಯಪಟಾಕಿ ದುರಂತ : ನರಹತ್ಯೆ ಸೇರಿ ಗಂಭೀರ ಸೆಕ್ಷನ್‍ಗಳಡಿ ಕಾನೂನು ಕ್ರಮ

ಪಟಾಕಿ ದುರಂತ : ನರಹತ್ಯೆ ಸೇರಿ ಗಂಭೀರ ಸೆಕ್ಷನ್‍ಗಳಡಿ ಕಾನೂನು ಕ್ರಮ

ಬೆಂಗಳೂರು, ಅ.8- ಅತ್ತಿಬೆಲೆ ಪಟಾಕಿ ದುರಂತದ ಪ್ರಕರಣದಲ್ಲಿ ಮೃತಪಟ್ಟ 12 ಮಂದಿಯ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಶವವನ್ನು ಸಂಬಂಧಿತರಿಗೆ ಹಸ್ತಾಂತರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ನರಹತ್ಯೆ ಸೇರಿದಂತೆ ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.

ಅತ್ತಿಬೆಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟಾಕಿ ಮಾರಾಟದ ಮಳಿಗೆ ಮತ್ತು ಗೋಡನ್‍ಗಳಲ್ಲಿ ಅಗ್ನಿನಂದಕ ಸಲಕರಣೆಗಳನ್ನು ಇಟ್ಟಿರಲಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ಗೋಡನ್‍ನ ಮಾಲಿಕರು, ಆತನ ಪುತ್ರ, ಮ್ಯಾನೇಜರ್ ಸೇರಿದಂತೆ ಐವರ ವಿರುದ್ಧ ಸ್ಪೋಟಕ ಕಾನೂನು, ಕೊಲೆಯಲ್ಲದ ನರಹತ್ಯೆ ಆರೋಪ ಸೇರಿದಂತೆ ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಎಫ್‍ಎಸ್‍ಎಲ್, ಅಗ್ನಿಶಾಮಕ ಮತ್ತು ಸೀನಫ್ ಕ್ರೈಂ ತಜ್ಞರು ವರದಿ ನೀಡಲಿದ್ದಾರೆ. ಅದರ ನಂತರ ತನಿಖೆ ಮುಂದುವರೆಯಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ : ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಹೈಕಮಾಂಡ್‍ಗೆ ರವಾನೆ

ಈವರೆಗೂ 14 ಮೃತದೇಹಗಳು ಪತ್ತೆಯಾಗಿವೆ. ಅದರಲ್ಲಿ 12 ಮಂದಿಯ ಪಾರ್ಥೀವ ಶರೀರಗಳನ್ನು ಗುರುತಿಸಲಾಗಿದೆ. ಸಂಬಂಕರ ಮಾಹಿತಿ ಆಧರಿಸಿ ಶವಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಲ್ಲಿ ಏನೆಲ್ಲಾ ಇರಬೇಕು, ಏನೆಲ್ಲಾ ಇಲ್ಲ ಎಂಬುದನ್ನು ತನಿಖೆ ನಡೆಸಲು ಪೊಲೀಸ್ ಮಹಾ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲವೂ ತನಿಖೆಯ ಬಳಿಕ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಕಠಿಣ ಕಾನೂನಿನಡಿ ಪ್ರಕರಣ :
ಘಟನೆ ಕುರಿತಂತೆ ಸ್ಥಳೀಯ ಕಾರ್ಮಿಕ ಲೋಗೇಶ್ವರನ್ ನೀಡಿರುವ ದೂರು ಆಧರಿಸಿ, ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್‍ನ ಮಾಲಿಕ ರಾಮಸ್ವಾಮಿ ರೆಡ್ಡಿ, ಇವರ ಪುತ್ರ ನವೀನ್‍ರೆಡ್ಡಿ, ಸಂಸ್ಥೆ ವ್ಯವಸ್ಥಾಪಕ ಲೋಕೇಶ್, ಗೋಧಾಮಿಗೆ ಕಟ್ಟಡ ಬಾಡಿಗೆ ನೀಡಿದ ಶ್ರೀಮತಿ ಜಯಮ್ಮ ಹಾಗೂ ಟ್ರೇಡರ್ಸ್‍ನ ಅನಿಲ್‍ರೆಡ್ಡಿ ಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ

ಎಫ್‍ಐಆರ್‍ನಲ್ಲಿ ಸೋಟಕ ನಿರ್ವಹಣಾ ಕಾಯಿದೆ ಸೆಕ್ಷನ್ 9 ಬಿ, ಭಾರತೀಯ ದಂಡ ಸಂಹಿತೆ 427 (ದುರ್ನಡತೆಯಿಂದ ನಷ್ಟ ಉಂಟು ಮಾಡುವುದು), 285 (ಉದಾಸೀನತೆಯಿಂದ ಬೆಂಕಿ ಅನಾಹುತಕ್ಕೆ ಕಾರಣವಾಗುವುದು), 286 (ಸೋಟಕಗಳ ನಿರ್ಲಕ್ಷತೆ ನಿರ್ವಹಣೆ), 304 (ಕೊಲೆಯಲ್ಲದ ನರಹತ್ಯೆ), 337 (ಉದಾಸೀನತೆಯಿಂದ ಮಾನವ ಜೀವಕ್ಕೆ ಅಪಾಯ ತಂದೊಡ್ಡುವುದು), 338 (ಜೀವ ಭದ್ರತೆಗೆ ಧಕ್ಕೆಯಾಗುವಂತ ಘಾಸಿ ಮಾಡುವುದು ಮತ್ತು ಇತರ ಸುರಕ್ಷತೆಯನ್ನು ನಿರ್ಲಕ್ಷಿಸುವುದು) ಸೇರಿದಂತೆ ಪ್ರಮುಖ ಕಾಯಿದೆಗಳಡಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Latest News