Saturday, May 4, 2024
Homeಕ್ರೀಡಾ ಸುದ್ದಿವಿಶ್ವಕಪ್ 2023 : ಗಿಲ್ ಔಟ್, ಇಶಾನ್ ಇನ್

ವಿಶ್ವಕಪ್ 2023 : ಗಿಲ್ ಔಟ್, ಇಶಾನ್ ಇನ್

ಚೆನ್ನೈ, ಅ.8- 2023ರ ವಿಶ್ವಕಪ್ ಟೂರ್ನಿಯಲ್ಲಿ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಅವರು ಪ್ಲೇಯಿಂಗ್ 11ನಿಂದ ಹೊರ ನಡೆದಿದ್ದು, ಯುವ ವಿಕೆಟ್ ಕೀಪರ್, ಬ್ಯಾಟರ್ ಇಶಾನ್ ಕಿಶನ್ ಅವರು ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊರಲಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮ್ಯಾಚ್ ರೆಫ್ರಿಯೊಂದಿಗೆ ಮಾತನಾಡಿ, ನಾವು ನಿಜಕ್ಕೂ ಉತ್ತಮ ಸ್ಥಿತಿಯಲ್ಲಿ ನಿಂತಿದ್ದೇವೆ, ಅಲ್ಲದೆ ಉತ್ತಮ ತಂಡವನ್ನು ಹೊಂದಿದ್ದೇವೆ, ಈ ಹಿಂದಿನ ಪಂದ್ಯದ ಫಲಿತಾಂಶವನ್ನು ಮರೆತು ಹೊಸದಾಗಿ ಪಂದ್ಯ ಆರಂಭಿಸಲಿದ್ದೇವೆ.

ಹೊಸ ಮದ್ಯದಂಗಡಿಗೆ ಅನುಮತಿ ನೀಡುವಂತೆ ಸಿಎಂ ಮೇಲೆ ಶಾಸಕರ ಒತ್ತಡ

ಗಾಯಗೊಂಡಿರುವ ಟ್ರಾವಿಸ್ ಹೆಡ್ ಅವರು ಇನ್ನೂ ಅಡಿಲೇಡ್‍ನಲ್ಲೇ ಇದ್ದಾರೆ. ಜೊತೆಗೆ ಸ್ಟಾರ್ ಆಲ್ ರೌಂಡರ್ ಮಾರ್ಕಸ್ ಸ್ಟೋನ್ನಿಸ್ ಅವರ ಸೇವೆಯನ್ನು ತಂಡ ಕಳೆದುಕೊಂಡಿದೆ’ ಎಂದು ಹೇಳಿದ್ದಾರೆ.

ಪಿಚ್ ಬೌಲರ್‍ಗಳಿಗೆ ಸಹಕಾರಿಯಾಗಿದೆ: ರೋಹಿತ್ ಶರ್ಮಾ
`ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸ್ಪಿನ್ನರ್‍ಗಳಿಗೆ ಹೆಚ್ಚು ಸಹಕಾರಿ ಆಗಿದೆ, ಪಂದ್ಯ ಸಾಗುತ್ತಿದ್ದಂತೆ ಚೆಂಡು ಹೆಚ್ಚು ತಿರುವು ಪಡೆಯುವ ಸಾಧ್ಯತೆಗಳಿವೆ. ಪಂದ್ಯ ಗೆಲ್ಲಲು ಬೇಕಾದ ಅಂಶಗಳನ್ನು ನಾವು ಪೂರ್ಣಗೊಳಿಸಿದ್ದೇವೆ. ಡೆಂಗ್ಯು ಜ್ವರದಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಶುಭಮನ್ ಗಿಲ್‍ಅವರು ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದು ಅವರ ಜಾಗದಲ್ಲಿ ಇಶಾನ್ ಕಿಶನ್ ಆಡಲಿದ್ದಾರೆ’ ‘ ಎಂದು ಹಿಟ್ ಮ್ಯಾನ್ ಹೇಳಿದ್ದಾರೆ.

ಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಐಪಿಎಲ್ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಚಿದಂಬರಂ ಕ್ರೀಡಾಂಗಣವು ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡಿರುವುದನ್ನು ಗಮನಿಸಿರುವ ಟೀಮ್ ಇಂಡಿಯಾ ಸೆಲೆಕ್ಟರ್ಸ್‍ಗಳು ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್‍ಗೆ ತಂಡದಲ್ಲಿ ಸ್ಪಿನ್ನರ್‍ಗಳ ರೂಪದಲ್ಲಿ ಸ್ಥಾನ ಕಲ್ಪಿಸಿದ್ದರೆ, ಆಸ್ಟ್ರೇಲಿಯಾ ಆ್ಯಡಂ ಜಂಪಾರನ್ನು ತಮ್ಮ ಸ್ಪಿನ್ ಬಳಗದಲ್ಲಿ ಸ್ಥಾನ ಕಲ್ಪಿಸಿದ್ದರೆ, ಭಾರತದ ವಿರುದ್ಧ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಗ್ಲೆನ್ ಮ್ಯಾಕ್ಸ್‍ವೆಲ್‍ಗೂ ಸ್ಥಾನ ನೀಡಿದೆ.

RELATED ARTICLES

Latest News