Monday, May 6, 2024
Homeಅಂತಾರಾಷ್ಟ್ರೀಯಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಪ್ಯಾಲೆಸ್ತೇನ್‍ನ ಉಗ್ರರ ನೆರವಿಗೆ ಬಂದ ಇರಾನ್ ಸೇನೆ

ಜೆರುಸಲೇಮ್, ಅ.8- ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನ ಹಮಾಸ್ ಉಗ್ರರ ನಡುವೆ ಏರ್ಪಟ್ಟಿರುವ ಯುದ್ಧ ತೀವ್ರಗೊಂಡಿದ್ದು, ಸಾವಿನ ಸಂಖ್ಯೆ ಸಾವಿರ ದಾಟಿದೆ. ಜಗತ್ತಿನ ಅತ್ಯಂತ ಬಲಿಷ್ಠ ಹಾಗೂ ಚಾಣಾಕ್ಯ ಸೇನೆ ಹೊಂದಿರುವ ರಾಷ್ಟ್ರವೆಂದೇ ಬಿಂಬಿತವಾಗಿರುವ ಇಸ್ರೇಲ್‍ನ ಎಲ್ಲಾ ದಿಕ್ಕುಗಳಿಂದಲೂ ಸುತ್ತುವರಿದಿರುವ ಹಮಾಸ್ ಉಗ್ರರಿಗೆ ನೆರೆಯ ಇರಾನ್ ಸೇನೆ ನೆರವು ನೀಡಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದರ ನಡುವೆ ಇಸ್ರೇಲ್‍ನ ಕೆಲವು ಗ್ರಾಮಗಳನ್ನು ವಶಕ್ಕೆ ಪಡೆದಿರುವ ಉಗ್ರರು ಅಲ್ಲಿರುವ ನಿವಾಸಿಗಳನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಡುವೆ ಫ್ರಾನ್ಸ್, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಇಸ್ರೇಲ್‍ಗೆ ಬೆಂಬಲ ಸೂಚಿಸಿ, ತಮ್ಮ ಶಸ್ತ್ರಾಸ್ತ್ರಗಳನ್ನು ಒದಗಿಸಿ ಉಗ್ರರನ್ನು ಸದೆಬಡೆಯಲು ಮುಂದಾಗಿವೆ.

ಇಸ್ರೇಲ್‍ನ ವಾಯುಪಡೆ ಪ್ರತಿದಾಳಿ ನಡೆಸಿದ್ದು, ಪ್ಯಾಲೆಸ್ತೇನ್‍ನ ಗಾಜಾಪಟ್ಟಿಯ ಬಳಿ ಸುಮಾರು 400 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಸ್ರೇಲ್‍ನ ಹಲವು ವಸತಿ ಪ್ರದೇಶಗಳು ಉಗ್ರರ ರಾಕೆಟ್ ದಾಳಿಯಿಂದ ಹಾನಿಗೊಂಡಿದ್ದು, ಸುಮಾರು 600 ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಹೊಸ ಮದ್ಯದಂಗಡಿಗೆ ಅನುಮತಿ ನೀಡುವಂತೆ ಸಿಎಂ ಮೇಲೆ ಶಾಸಕರ ಒತ್ತಡ

ಕ್ಷಿಪಣಿ ದಾಳಿಗಳಿಂದ ಎರಡೂ ದೇಶಗಳ ಗಡಿಭಾಗದಲ್ಲಿ ಕಟ್ಟಡಗಳು ಧ್ವಂಸಗೊಂಡಿದ್ದು, ವಾಹನಗಳು ಹತ್ತಿ ಉರಿಯುತ್ತಿವೆ. ಜನರು ಭೀತಿಯಿಂದ ಬಂಕರ್‍ಗಳಲ್ಲಿ, ಕ್ಷಿಪಣಿ ನಿರೋಧಕ ಸ್ಥಳಗಳಲ್ಲಿ ಹಾಗೂ ಸುರಕ್ಷತಾ ನೆಲೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇಸ್ರೇಲ್‍ಗೆ ಭೇಟಿ ನೀಡಿರುವ ಹಲವು ರಾಷ್ಟ್ರಗಳ ಪ್ರವಾಸಿಗರ ಸುರಕ್ಷತೆ ಕುರಿತು ಆಯಾ ದೇಶಗಳ ಕಾಳಜಿ ವ್ಯಕ್ತವಾಗಿದೆ. ಭಾರತದ ಬಾಲಿವುಡ್‍ನ ಕೆಲವು ನಟ, ನಟಿಯರು ಇಸ್ರೇಲ್‍ಗೆ ತೆರಳಿದ್ದಾರೆ, ಜೊತೆಗೆ ಔದ್ಯೋಗಿಕ ಉದ್ದೇಶಕ್ಕಾಗಿ ನೆಲೆಸಿರುವವರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆಗಳು ಚಾಲ್ತಿಯಲ್ಲಿವೆ.

ಸಂಪರ್ಕಕ್ಕೆ ಸಿಗದೇ ಇರುವವರ ಹುಡುಕಾಟಗಳು ಮುಂದುವರೆದಿವೆ ಎಂದು ಭಾರತದ ರಾಯಭಾರಿ ಕಚೇರಿ ಮೂಲಗಳು ಹೇಳಿವೆ. ಇಸ್ರೇಲ್ ಯುದ್ಧ ಘೋಷಣೆ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಹಲವು ದೇಶಗಳ ನಡುವೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಅಮೆರಿಕಾ, ಕೆನಡಾ, ರಷ್ಯಾ, ಬ್ರಿಟನ್, ಆಸ್ಟ್ರೇಲಿಯಾದಂತ ರಾಷ್ಟ್ರಗಳು ಉಗ್ರರ ದಾಳಿಯನ್ನು ಖಂಡಿಸಿದರೆ, ಸೌದಿ ಅರೇಬಿಯಾ ಹಾಗೂ ಎಮಿರೆಕ್ಸ್ ರಾಷ್ಟ್ರಗಳು ಕಾದು ನೋಡುವ ತಂತ್ರಕ್ಕೆ ಶರಣಾಗಿವೆ.

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ, ಸಾವಿನ ಸಂಖ್ಯೆ 2,000 ಕ್ಕೆ ಏರಿಕೆ

ಉಕ್ರೇನ್ ಯುದ್ಧದ ನಂತರ ಈಗ ಮತ್ತೆ ಮಧ್ಯಪ್ರಾಚ್ಯದಲ್ಲಿನ ಎರಡು ರಾಷ್ಟ್ರಗಳ ಸಂಘರ್ಷ ವಿಶ್ವದ ಮೇಲೆ ಯುದ್ಧದ ಕಾರ್ಮೋಡದ ಕರಿನೆರಳನ್ನು ಹೆಚ್ಚಿಸಿದೆ. ಇಸ್ರೇಲ್ ಸಂಘರ್ಷದಿಂದಾಗಿ ರಕ್ಷಣಾ ಸಾಮಗ್ರಿಗಳು, ಆಹಾರ ಹಾಗೂ ತಾಂತ್ರಿಕತೆ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕವಿದ್ದರೆ, ಅರಬ್ ರಾಷ್ಟ್ರಗಳ ಮಧ್ಯಪ್ರವೇಶದಿಂದ ತೈಲ ಮಾರುಕಟ್ಟೆ ಏರಿಳಿತಗೊಳ್ಳುವ ನಿರೀಕ್ಷೆಯಿದೆ.

RELATED ARTICLES

Latest News