ಬೆಂಗಳೂರು, ಅ.8- ತವರು ಅಂಗಳದಲ್ಲಿ ನಡೆಯುತ್ತಿರುವ 2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ವೈಯಕ್ತಿಕ ದಾಖಲೆಗಾಗಿ ಆಡದೆ ದೇಶಕ್ಕೆ ಟ್ರೋಫಿ ಗೆದ್ದುಕೊಡುವುದಾಗಿ ಒಗ್ಗಟ್ಟಿನಿಂದ ಆಡಿ ಎಂದು ಭಾರತದ ಟರ್ಬನೇಟರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ಶ್ರೀಲಂಕಾವನ್ನು ಮಣಿಸಿ 2ನೇ ಬಾರಿ ವಿಶ್ವ ಟ್ರೋಫಿ ಗೆದ್ದ ನಂತರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣ ಸುತ್ತ ಹೊತ್ತು ತಿರುಗಿ ಗೌರವ ಸಲ್ಲಿಸಲಾಗಿತ್ತು. ಸಚಿನ್ ತಮ್ಮ 6ನೇ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಿಗ್ತಿಲ್ಲ ಉದ್ಯೋಗ
2011ರ ವಿಶ್ವಕಪ್ ಟೂರ್ನಿಯ ವೇಳೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್‍ಗೆ ಸಿಕ್ಕಂತಹ ಗೌರವ ಇದುವರೆಗೂ ಯಾವ ಆಟಗಾರರಿಗೂ ಸಿಕ್ಕಿರಲಿಲ್ಲ. ವಿಶ್ವಕಪ್ ಮುಕುಟ ಗೆದ್ದು ಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಗೌರವಕ್ಕೆ ಪಾತ್ರರಾಗಿದ್ದರು. ಆದ ನಂತರ ಇದೇ ಗೌರವವನ್ನು ಬೇರೆ ಆಟಗಾರರು ಪಡೆದಿದ್ದನ್ನು ನಾನು ನೋಡಿಲ್ಲ' ಎಂದು ಮಾಜಿ ಆಫ್ ಸ್ಪಿನ್ನರ್ ಹೇಳಿದ್ದಾರೆ. ನಾನು ದೇಶಕ್ಕಾಗಿ ಆಡಿದ್ದೆ , ವೈಯಕ್ತಿಕ ದಾಖಲೆಗಾಗಿ ಅಲ್ಲ:
ನೀವು ಭಾರತ ದೇಶದ ಧ್ವಜಕ್ಕೆ ಗೌರವ ಸಲ್ಲಿಸುವ ದೃಷ್ಟಿಯಿಂದ ಆಡಬೇಕು.
ನಾನು ಯಾವಾಗಲೂ ಭಾರತಕ್ಕಾಗಿ ಆಡಿದ್ದೇನೆಯೇ ಹೊರತು ವೈಯಕ್ತಿಕ ದಾಖಲೆಗಳ ಬಗ್ಗೆ ಎಂದಿಗೂ ಚಿಂತಿಸಿರಲಿಲ್ಲ. ನಾನು ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಆಡಿದ್ದೇನೆ. ನನಗೆ ನಾಯಕರು ಯಾರು ಎಂಬುದು ಮುಖ್ಯ ಆಗಿರಲಿಲ್ಲ, ಬದಲಿಗೆ ನನ್ನ ಆಟದ ಬಗ್ಗೆ ಸಾಕಷ್ಟು ಗಮನ ಹರಿಸಿದ್ದೆ’ ಎಂದು ಖ್ಯಾತ ಕ್ರಿಕೆಟ್ ವಿಶ್ಲೇಷಕ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ನಿವಾಸದ ಮೇಲೆ ಸಿಬಿಐ ದಾಳಿ
ದೇಶಕ್ಕಾಗಿ ಟ್ರೋಫಿ ಗೆಲ್ಲಬೇಕು:
`ನಾನು ಬೇರೆ ವಿಚಾರಗಳ ಬಗ್ಗೆ ಚಿಂತಿಸದೆ, ದೇಶಕ್ಕಾಗಿ ಮಾತ್ರ ಆಡಿದ್ದೇನೆ. ತವರಿನ ಅಂಗಳದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಭಾರತದ ಗೆಲುವಿಗಾಗಿ ಆಡಬೇಕು, ಅದು ಬಿಟ್ಟು ವಿರಾಟ್ ಕೊಹ್ಲಿಗಾಗಿ ಆಗಲಿ, ರಾಹುಲ್ ದ್ರಾವಿಡ್‍ಗಾಗಿ ಗೆಲುವು ಸಾಸುವುದಲ್ಲ’ ಎಂದು ಹರ್ಭಜನ್‍ಸಿಂಗ್ ಹೇಳಿದ್ದಾರೆ.