Homeರಾಜ್ಯಭೀಕರ ಬರ ಪರಿಸ್ಥಿತಿಯಿಂದ ವಿದ್ಯುತ್‌ ಅಭಾವ : ಸಿಎಂ ಡಿಕೆಶಿ ಆತಂಕ

ಭೀಕರ ಬರ ಪರಿಸ್ಥಿತಿಯಿಂದ ವಿದ್ಯುತ್‌ ಅಭಾವ : ಸಿಎಂ ಡಿಕೆಶಿ ಆತಂಕ

ಬೆಂಗಳೂರು, ಸೆ.24- ಮಳೆ ಕೊರತೆಯಿಂದ ದೇಶಾದ್ಯಂತ ಎದುರಾಗಿರುವ ಭೀಕರ ಬರ ಪರಿಸ್ಥಿತಿ ಕಾರಣಕ್ಕೆ ವಿದ್ಯುತ್‌ ಅಭಾವ ತೀವ್ರವಾಗಿದೆ. ನೆರೆ ರಾಜ್ಯಗಳಿಂದಲೂ ಖರೀದಿಸಲು ವಿದ್ಯುತ್‌ ಲಭ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವರು ದಿನನಿತ್ಯವೂ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆಯ ಮೇಲೆ ನಿಗಾ ವಹಿಸಿದ್ದಾರೆ. ಅಧಿಕಾರಿಗಳು ಜನರಿಗೆ ಸಹಾಯ ಮಾಡಲು ಲಭ್ಯ ಇರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

ಬರ ಪರಿಸ್ಥಿತಿಯ ವೇಳೆಯಲ್ಲಿ ಬೆಳೆ ನಷ್ಟ, ನೀರು ಮತ್ತು ವಿದ್ಯುತ್ತಿನ ಸಮಸ್ಯೆ ತೀವ್ರವಾಗಿದೆ. ದಿನನಿತ್ಯದ ಬೇಡಿಕೆ 20 ಸಾವಿರ ಮೆಗಾ ವ್ಯಾಟ್‌ಗೆ ತಲುಪಿದೆ ಎಂದು ಹೇಳಿದರು. ಬೇರೆ ರಾಜ್ಯಗಳಿಂದ ವಿದ್ಯುತ್‌ ಖರೀದಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಎಲ್ಲಿಯೂ ಲಭ್ಯವಿಲ್ಲ.

ಪ್ರತಿ ಯೂನಿಟ್‌ ವಿದ್ಯುತ್‌ ಬೆಲೆ ರೂ. 20 ಗಳಿಂದ 23ಗಳವರೆಗೂ ಏರಿಕೆಯಾಗಿದೆ ಎಂದು ವಿವರಿಸಿದರು. ಕಲ್ಲಿದ್ದಲ ಒಂದೆರಡು ದಾಸ್ತಾನು ಒಂದೆರಡು ದಿನಕ್ಕೆ ಮುಗಿಯುತ್ತದೆ. ಅನಂತರ ಉಷ್ಣ ವಿದ್ಯುತ್‌ ಉತ್ಪಾದನೆ ಕೂಡ ತಗ್ಗಬಹುದು. ನೀರಿನ ಕೊರತೆಯಿಂದ ಜಲ ವಿದ್ಯುತ್‌ ಸಮಸ್ಯೆ ಇದೆ ಎಂದರು.

ಜೈವಿಕ ಮಾರ್ಗದ ಮೂಲಕ ಇಂಧನ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲಿ ತಯಾರಾಗುವ ವಿದ್ಯುತ್ತನ್ನು ಬೇರೆ ಕಡೆಗೆ ಮಾರಾಟ ಮಾಡಬಾರದು, ರಾಜ್ಯ ಸರ್ಕಾರಕ್ಕೆ ಪೂರೈಸಬೇಕು ಎಂಬ ಷರತ್ತು ವಿಧಿಸಲಾಗುವುದು. ಕೆಲವು ನಿರ್ಬಂಧಗಳನ್ನು ವಿಧಿಸುವ ಮೂಲಕ ವಿದ್ಯುತ್‌ ಕೊರತೆಯನ್ನು ಸರಿದೂಗಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಕರ್ನಾಟಕ ಮಾತ್ರವಲ್ಲದೆ ದೇಶದ ಬಹುತೇಕ ರಾಜ್ಯಗಳಲ್ಲೂ ಇದೆ ಸಮಸ್ಯೆ ಇದೆ ಎಂದು ವಿವರಿಸಿದರು. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು ಸುಲಭವಲ್ಲ. ಆದರೂ ನಾವು ಅದನ್ನು ನಿರ್ವಹಣೆ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಆರ್ಥಿಕ ಇಲಾಖೆ ಕಾಲಕಾಲಕ್ಕೆ ಎಚ್ಚರಿಕೆಯ ಪತ್ರ ಬರೆಯುತ್ತದೆ.ಅದರಲ್ಲಿ ಹೊಸದೇನೂ ಇಲ್ಲ. ಈ ಹಿಂದೆ ಬಿ.ಎಸ್‌‍.ಯಡಿಯೂರಪ್ಪ, ಬಸವರಾಜ ಬೊಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗಲು ಆರ್ಥಿಕ ಇಲಾಖೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಅವುಗಳನ್ನು ಬಿಡುಗಡೆ ಮಾಡುತ್ತೇನೆ. ಈಗ ಅದೇ ರೀತಿಯ ಪತ್ರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ನಡೆಸುತ್ತಿದೆ. ದೊಡ್ಡದಾಗಿ ಬಿಂಬಿಸಲಾಗುತ್ತಿದೆ, ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆರ್ಥಿಕ ಶವಯಾತ್ರೆ ಮಾಡುತ್ತಿದ್ದಾರೆ.ಅದಕ್ಕೆ ನಾನು ವಿರೋಧ ವ್ಯಕ್ತಪಡಿಸುವುದಿಲ್ಲ ಎಂದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದರು, ಎಷ್ಟು ಹಣ ಬಳಕೆಯಾಗಿತ್ತು ಎಂಬುದನ್ನು ನಾನು ಬಹಿರಂಗಪಡಿಸುತ್ತೇನೆ. ಟೀಕಿಸುವುದು ಸುಲಭ. ಆದರೆ ನಿರ್ವಹಣೆ ಕಷ್ಟ. ನಾವು ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಜಾತಿ ಮತ್ತು ಧರ್ಮದ ಆಧಾರದಲ್ಲಿ ಭಾವನಾತಕ ವಿಚಾರವಾಗಿ ನಾನು ರಾಜಕಾರಣ ಮಾಡುವುದಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ಹೇಳಿದರು. ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ತಾಕ್ಕೂಕುಗಳು ಬರ ಪರಿಸ್ಥಿತಿಯಿಂದ ಬಳಲುತ್ತಿವೆ. ಕರ್ನಾಟಕಕ್ಕೆ ಹೆಚ್ಚಿನ ನೆರವು ನೀಡುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರ್ತವ್ಯ ಎಂದು ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಪ್ರಧಾನಿ ಅವರ ಭೇಟಿಗೆ ಸಮಯ ಕೇಳಲಾಗುವುದು, ಅವಕಾಶ ಸಿಕ್ಕ ತಕ್ಷಣವೇ ರಾಜ್ಯದಿಂದ ಸರ್ವ ಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುತ್ತೇನೆ. ಬರ ನಿರ್ವಹಣೆಗೆ ಮಧ್ಯಂತರ ಪರಿಹಾರ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಬರ ನಿರ್ವಹಣೆ ಕುರಿತು ಎರಡು ದಿನಗಳ ಚರ್ಚೆಯಾಗಿದೆ. ವ್ಯಾಪಕ ಅಧ್ಯಯನ ಮಾಡಿರುವ ಪರಮೇಶ್ವರ್‌ ಅವರು ಇಂದು ಚರ್ಚೆಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ವಿರೋಧ ಪಕ್ಷಗಳು ಟೀಕೆ ಮಾಡುವುದಕ್ಕಷ್ಟೇ ಸೀಮಿತವಾಗಿರದೇ, ರಾಜ್ಯದ ನೆರವಿಗೆ ಬರಬೇಕು. ಸರ್ವ ಪಕ್ಷ ನಿಯೋಗದಲ್ಲಿ ಭಾಗವಹಿಸಿ ಕೇಂದ್ರದ ಮೇಲೆ ಒತ್ತಡ ಹೇರಲು ಸಹಕರಿಸಬೇಕು ಎಂದು ಹೇಳಿದರು.

RELATED ARTICLES
spot_img

Latest News