ಕೈರೋ, ಸೆ.8- ಯೆಮೆನ್‌ನ ಉತ್ತರ ಭಾಗದಲ್ಲಿರುವ ಜೈಲೊಂದರ ಮೇಲೆ ಸೌದಿ ಅರೇಬಿಯಾ ವೈಮಾನಿಕ ದಾಳಿ ನಡೆಸಿದೆ ಎಂದು ಹೌತಿ ಬಂಡುಕೋರರು ಆರೋಪಿಸಿದ್ದಾರೆ. ದಾಳಿಯಲ್ಲಿ ಬಾಲಕನೂ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಹೌತಿ ಪಡೆಗಳು ಹೇಳಿಕೊಂಡಿವೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಹಾಗೂ ಸೌದಿ ಅರೇಬಿಯಾ ಬೆಂಬಲಿತ ಯೆಮೆನ್ ಪಡೆಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ.
ದಾಳಿಯ ನಂತರದ ದೃಶ್ಯಗಳೆಂದು ಹೇಳಲಾದ 46 ಸೆಕೆಂಡ್‌ಗಳ ವಿಡಿಯೊವನ್ನು ಹೌತಿ ಪರ ಅಲ್-ಮಸೀರಾ ವಾಹಿನಿ ಪ್ರಸಾರ ಮಾಡಿದೆ. ವಿಡಿಯೊದಲ್ಲಿ ಕುಸಿದುಬಿದ್ದ ಕಟ್ಟಡದ ಅವಶೇಷಗಳು ಹಾಗೂ ಧ್ವಂಸಗೊಂಡಿರುವ ಜೈಲು ಕಟ್ಟಡದ ದೃಶ್ಯಗಳು ಕಂಡುಬಂದಿವೆ.
ಹೌತಿ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಯಾಹ್ಯಾ ಸರೀ ಮಾತನಾಡಿ, ಜೌಫ್ ಪ್ರದೇಶದಲ್ಲಿ ಸೌದಿ ಅರೇಬಿಯಾ ವೈಮಾನಿಕ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸೌದಿ ಪಡೆಗಳು ವಿಚಕ್ಷಣಾ ಡ್ರೋನ್‌ಗಳನ್ನು ನಿಯೋಜಿಸುವುದರ ಜೊತೆಗೆ ಬಾಡಿಗೆ ಯೋಧರಿಗೆ ವಿವಿಧ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.
ದಾಳಿಯ ಕುರಿತು ಸೌದಿ ಅರೇಬಿಯಾ ಸರ್ಕಾರದಿಂದ ತಕ್ಷಣ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
