ಇಸ್ರೇಲ್,ಅ.9-ಉಗ್ರಗಾಮಿ ಸಂಘಟನೆ ಹಮಾಸ್ ಬಗ್ಗುಬಡಿಯಲು ಇಸ್ರೇಲ್‍ಗೆ ನೆರವಾಗಲು ಅಮೆರಿಕ ಯುದ್ಧ ನೌಕೆಯನ್ನು ಕಳುಹಿಸಿದೆ, ಇಸ್ರೇಲ್ ಸೈನಿಕರಿಗೆ ಸಹಾಯವಾಗುವಂತೆ ಯುದ್ಧ ನೌಕೆಯನ್ನು ಕಳುಹಿಸಿದ್ದು ಕಾರ್ಯಾಚರಣೆ ಆರಂಭಿಸಿದೆ. ಇದಲ್ಲದೆ ಯುದ್ಧ ವಿಮಾನವನ್ನು ಕೂಡ ಕಳುಹಿಸಲು ಸನ್ನದ್ದವಾಗಿದೆ.
ಇಸ್ರೇಲ್‍ಗೆ ಎಲ್ಲಾ ರೀತಿ ಸಹಾಯ ಮಾಡಲು ಬಹಿರಂಗವಾಗಿ ಅಮೆರಿಕ ಘೋಷಿಸಿದ್ದು ಮೂಲಗಳ ಪ್ರಕಾರ ಅಧ್ಯಕ್ಷ ಜೋ ಬಿಡನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ತರುವಾಯ ,ಮೆಡಿಟರೇನಿಯನ್ ಸಮುದ್ರಕ್ಕೆ ಯುದ್ಧ ಹಡಗುಗಳನ್ನು ಕಳುಹಿಸಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯಲ್ಲಿ ನಾಲ್ವರು ಅಮೆರಿಕನ್ ಪ್ರಜೆಗಳೂ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ ಯುದ್ದ ಬೀಕರತೆ ಬಡೆಯುತ್ತಿದ್ದು ಪ್ಯಾಲಿಸ್ತೇನ್ ಅಡು ತಾಣಗಳ ಮೇಲೆ ಇಸ್ರೇಲ್ ಸೇನೆ ಮಿಂಚಿನ ದಾಳಿ ನಡೆಸಿದೆ.
ವೈಯಕ್ತಿಕ ದಾಖಲೆ ಮರೆತು ದೇಶಕ್ಕಾಗಿ ಟ್ರೋಫಿ ಗೆಲ್ಲಿ : ಹರ್ಭಜನ್ ಸಿಂಗ್
ಗಾಜಾ ಪಟ್ಟಿಯ ಬಳಿ ದಾಳಿ ವೇಳೆ ಸುಮಾರು 1500 ಜನರು ಸಾವನ್ನಪ್ಪಿದ್ದಾರೆ ಉಗ್ರರ ದಾಳಿಯಲ್ಲಿ ಹಲವು ಸೈನಿಕರು ಮತ್ತು ಪೊಲೀಸರು ಸೇರಿದಂತೆ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು 2,048ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಳಕಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಜಾ ಗಡಿಯಲ್ಲಿ ಇಸ್ರೇಲ್ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಎಲ್ಲಾ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸೇನಾ ಮೂಲಗಳನ್ನು ಉದ್ದೇಶಿಸಿ ಇಲ್ಲಿನ ಮಾಧ್ಯಮ ವರದಿ ಮಾಡಿದೆ.
ಸಂಗೀತ ಕಾರ್ಯಕ್ರಮದ ವೇಲೆ ಉಗ್ಗರ ದಾಳಿಯಲ್ಲಿ ಸುಮಾರು 260 ಜನರು ಬಲಿಯಾಗಿದ್ದು ಅವರ ಶವಗಳನ್ನು ತೆರವುಗೊಳಿಸಿ ಪ್ರದೇಶವನ್ನು ಸೇನೆ ಸುತ್ತುವರೆದಿದೆ