Homeರಾಜ್ಯಶಾರ್ಜಾದಲ್ಲಿ ಪತ್ನಿಯಿಂದಲೇ ಪತಿ ಕೊಲೆ : ಕುಂದಾಪುರ ತಲುಪುದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ

ಶಾರ್ಜಾದಲ್ಲಿ ಪತ್ನಿಯಿಂದಲೇ ಪತಿ ಕೊಲೆ : ಕುಂದಾಪುರ ತಲುಪುದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ

ಬೆಂಗಳೂರು, ಸೆ.25- ದುಬೈನಲ್ಲಿ ಪತ್ನಿಯೇ ಭೀಕರವಾಗಿ ಪತಿಯನ್ನು ಕೊಲೆ ಮಾಡಿ, ಹತ್ತಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿಟ್ಟಿದ್ದ ಮೃತದೇಹ ಇಂದು ಉಡುಪಿಯ ಕುಂದಾಪುರಕ್ಕೆ ಬಂದಿದ್ದು, ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಮೂಲದ ಅಲ್ವಿನ್‌ ಪ್ರಕಾಶ್‌ ಕುಂದರ್‌ ದುಬೈನ ಶಾರ್ಜಾದಲ್ಲಿ ಪತ್ನಿ ಟೀನಾಳೊಂದಿಗೆ ನೆಲೆಸಿದ್ದರು. ಸುಮಾರು ಎರಡು ತಿಂಗಳ ಹಿಂದೆ ಈತನನ್ನು ಪತ್ನಿ ಭೀಕರವಾಗಿ ಕೊಲೆ ಮಾಡಿ, ದೇಹವನ್ನು ಹತ್ತಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ಚೀಲಗಳಲ್ಲಿ ತುಂಬಿಸಿ, ಅದನ್ನು ಕಾರಿನಲ್ಲಿಟ್ಟು ಮಗನೊಂದಿಗೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕುಟುಂಬಸ್ಥರು ಆಘಾತಗೊಂಡಿದ್ದಾರೆ. ಇದೀಗ ದುಬೈನಿಂದ ವಿಮಾನದ ಮೂಲಕ ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಇಂದು ಕುಂದಾಪುರಕ್ಕೆ ರವಾನಿಸಲಾಗಿದೆ. ಇಂದು ಕುಟುಂಬಸ್ಥರು ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರ ಅಂತ್ಯಸಂಸ್ಕಾರವನ್ನು ತಮ್ಮ ಸಂಪ್ರದಾಯದಂತೆ ನೆರವೇರಿಸಿದ್ದಾರೆ.

RELATED ARTICLES
spot_img

Latest News