Friday, November 22, 2024
Homeರಾಷ್ಟ್ರೀಯ | Nationalಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ

ಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ

ಲಕ್ನೋ,ಅ. 9 (ಪಿಟಿಐ)-ಬಹು ಸಮಾಜವನ್ನು ಗುಲಾಮಗಿರಿಯಿಂದ ಹೊರತರಲು ಹಾಗೂ ಆ ಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲೂ ಬಿಎಸ್‍ಪಿ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ಧಾರೆ.

ಬಿಎಸ್‍ಪಿ ಪಕ್ಷದ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಹಿಂದಿಯಲ್ಲಿ ಎಕ್ಸ್‍ನಲ್ಲಿ ಸರಣಿ ಪೋಸ್ಟ್‌ಗಳನ್ನು  ಮಾಡುವ ಮೂಲಕ ಕಾನ್ಶಿರಾಮ್ ಅವರ ಗುಣಗಾನ ಮಾಡಿದ್ದಾರೆ.

ಮಾಯಾವತಿ ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಬಿಎಸ್‍ಪಿ ಅಧಿಕಾರಕ್ಕೆ ಬರಲು ಕಾನ್ಶಿರಾಮ್ ಅವರ ಹೋರಾಟದ ಕಾರಣ ಎಂದು ಹೇಳಿಕೊಂಡಿದ್ದಾರೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಆತ್ಮಗೌರವ ಚಳವಳಿಯನ್ನು ಜೀವಂತವಾಗಿರಿಸಿದ ಗೌರವಾನ್ವಿತ ಕಾನ್ಶಿ ರಾಮ್ ಜಿ ಅವರಿಗೆ ಇಂದು ಅವರ ಪುಣ್ಯತಿಥಿಯಂದು ನಮನಗಳು ಎಂದು ಬಿಎಸ್‌ಪಿ ಮುಖ್ಯಸ್ಥರು ಹೇಳಿದ್ದಾರೆ.

ಇಸ್ರೇಲ್‍ ಸೈನಿಕರ ನೆರವಿಗೆ ಯುದ್ಧ ನೌಕೆ ಕಳಿಸಿದ ಅಮೆರಿಕ

ದೇಶಾದ್ಯಂತ ಬಿಎಸ್‌ಪಿ  ಜನರು ಬಹುಜನ ಹೀರೋ ಅನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಪಕ್ಷವು ಕಾನ್ಶಿರಾಮ್ ಅವರ ಧ್ಯೇಯವನ್ನು ಪೂರೈಸುತ್ತದೆ, ಅದಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಮಾರ್ಚ್ 15, 1934 ರಂದು ಪಂಜಾಬ್‍ನ ರೂಪನಗರದಲ್ಲಿ ಜನಿಸಿದ ಕಾನ್ಶಿ ರಾಮ್ ಹಿಂದುಳಿದ ವರ್ಗಗಳ ಉನ್ನತಿ ಮತ್ತು ರಾಜಕೀಯ ಸಜ್ಜುಗೊಳಿಸುವಿಕೆಗಾಗಿ ಕೆಲಸ ಮಾಡಿದರು.

ಅವರು 1971 ರಲ್ಲಿ ದಲಿತ ಶೋಷಿತ್ ಸಮಾಜ ಸಂಘರ್ಷ ಸಮಿತಿ, ಅಖಿಲ ಭಾರತ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಸಮುದಾಯಗಳ ನೌಕರರ ಒಕ್ಕೂಟ ಮತ್ತು 1984 ರಲ್ಲಿ ಬಿಎಸ್‍ಪಿ ಪಕ್ಷವನ್ನು ಸ್ಥಾಪಿಸಿದರು. ಅವರು ಅಕ್ಟೋಬರ್ 9, 2006 ರಂದು ದೆಹಲಿಯಲ್ಲಿ ನಿಧನರಾದರು.

RELATED ARTICLES

Latest News