Friday, November 22, 2024
Homeರಾಜ್ಯಬಿಜೆಪಿ ಜಾತಿವಾರು ಟಿಕೆಟ್ ಲೆಕ್ಕಾಚಾರ, ವೀರಶೈವ ಲಿಂಗಾಯತರಿಗೆ ಹೆಚ್ಚುಪಾಲು

ಬಿಜೆಪಿ ಜಾತಿವಾರು ಟಿಕೆಟ್ ಲೆಕ್ಕಾಚಾರ, ವೀರಶೈವ ಲಿಂಗಾಯತರಿಗೆ ಹೆಚ್ಚುಪಾಲು

ಬೆಂಗಳೂರು,ಮಾ.25- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಕೊಟ್ಟಿದ್ದ ಲಿಂಗಾಯಿತ ಮತಬ್ಯಾಂಕ್‍ನ್ನು ಭದ್ರ ಮಾಡಿಕೊಳ್ಳಲು ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದೆ. 25 ಕ್ಷೇತ್ರಗಳ ಪೈಕಿ ಪ್ರಕಟಗೊಂಡಿರುವ 24 ಕ್ಷೇತ್ರಗಳ ಜಾತಿವಾರು ಪಟ್ಟಿಯನ್ನು ಅವಲೋಕಿಸಿದಾಗ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಕೈಕೊಡದಂತೆ ಭದ್ರಪಡಿಸಿಕೊಳ್ಳಲು 9 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ 3 ಕ್ಷೇತ್ರಗಳು, ಬ್ರಾಹ್ಮಣರಿಗೆ 3, ಪರಿಶಿಷ್ಟ ಜಾತಿಗೆ 3, ಪರಿಶಿಷ್ಟ ಪಂಗಡಕ್ಕೆ 2, ಹಿಂದುಳಿದ ವರ್ಗಕ್ಕೆ 3, ಅತಿ ಹಿಂದುಳಿದ ಮತ್ತು ಕ್ಷತ್ರೀಯ ಸಮುದಾಯಕ್ಕೆ ತಲಾ ಒಂದು ಕ್ಷೇತ್ರವನ್ನು ನೀಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವೀರಶೈವ ಲಿಂಗಾಯಿತರು ಕೈಕೊಟ್ಟು ಕಾಂಗ್ರೆಸ್ ಬೆಂಬಲಿಸಿದ್ದು, ಫಲಿತಾಂಶದಿಂದಲೇ ಸಾಬೀತಾಗಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಬಿಜೆಪಿ ವರಿಷ್ಠರು ಲಿಂಗಾಯತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅದೇ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ.

ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರು, ಬೀದರ್‍ನಿಂದ ಭಗವಂತ ಖೂಬಾ, ಕೊಪ್ಪಳ – ಬಸವರಾಜ ಕ್ಯಾವಟಗಿಗೆ ಟಿಕೆಟ್ ನೀಡಲಾಗಿದೆ. ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ್, ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ, ತುಮಕೂರಿನಿಂದ ವಿ.ಸೋಮಣ್ಣನವರಿಗೆ ಮಣೆ ಹಾಕಲಾಗಿದೆ.

ರಾಜ್ಯದಲ್ಲಿ ಎರಡನೇ ಅತಿದೊಡ್ಡ ಸಮುದಾಯ ಎಂದು ಹೇಳಲಾಗುತ್ತಿರುವ ಒಕ್ಕಲಿಗ ಸಮುದಾಯಕ್ಕೆ 3 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ, ಚಿಕ್ಕಬಳ್ಲಾಪುರದಿಂದ ಡಾ.ಕೆ.ಸುಧಾಕರ್, ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಅವಕಾಶ ನೀಡಿದೆ. ಹಿಂದುಳಿದ ವರ್ಗ ಬಿಲ್ಲವ ಸಮಾಜಕ್ಕೆ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿದ್ದು, ಉಡುಪಿ- ಚಿಕ್ಕಮಗಳೂರಿನಿಂದ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಲ ಸ್ಪರ್ಧಿಸಲಿದ್ದಾರೆ..

ಪರಿಶಿಷ್ಟ ಜಾತಿಯವರಿಗೆ 3 ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ನೀಡಿದ್ದು, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಚಾಮರಾಜನಗರದಿಂದ ಬಾಲರಾಜ್ ಅವರಿಗೆ ಸ್ರ್ಪಸಲು ಅವಕಾಶ ನೀಡಲಾಗಿದೆ. ಪರಿಶಿಷ್ಟ ಪಂಗಡದವರಿಗೆ 2 ಕ್ಷೇತ್ರಗಳಲ್ಲಿ ಪಕ್ಷ ಟಿಕೆಟ್ ನೀಡಿದ್ದು ರಾಯಚೂರಿನಿಂದ ರಾಜಾ ಅಮರೇಶ್ ನಾಯಕ್ ಹಾಗೂ ಬಳ್ಳಾರಿಯಿಂದ ಶ್ರೀರಾಮುಲು ಅವರು ಸ್ರ್ಪಸಲಿದ್ದಾರೆ.

ಇನ್ನು ಉಳಿದಂತೆ ಕಲಬುರಗಿಯಿಂದ ಡಾ.ಉಮೇಶ್ ಜಾಧವ್-ಬಂಜಾರ, ಮೈಸೂರು-ಕೊಡುಗು ಕ್ಷೇತ್ರದಿಂದ ಯದುವೀರ ಒಡೆಯರ್, ಕ್ಷತ್ರಿಯ ಸಮುದಾಯಕ್ಕೆ ಮಣೆ ಹಾಕಲಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿರುವುದರಿಂದ ಅದೇ ಸಮುದಾಯಕ್ಕೆ ಟಿಕೆಟ್ ನೀಡಲೇಕಿದೆ. .

ಜಾತಿ ಬಲಾಬಲ :
ಲಿಂಗಾಯಿತ -9
ಒಕ್ಕಲಿಗ -3
ಬ್ರಾಹ್ಮಣ -3
ಹಿಂದುಳಿದ ವರ್ಗ -3
ಪರಿಶಿಷ್ಟ ಜಾತಿ -3
ಪರಿಶಿಷ್ಟ ಪಂಗಡ -2
ಬಂಜಾರ -1
ಕ್ಷತ್ರಿಯ -1

RELATED ARTICLES

Latest News