Homeರಾಷ್ಟ್ರೀಯಹನುಮಾನ್‌ ಚಾಲೀಸಾ ಪಠಿಸಿಸುತ್ತ ಭಯೋತ್ಪಾದಕ ಸಹ-ಪೈಲಟ್ ಜೊತೆ ಹೋರಾಡಿದ್ದ 'ಹೀರೋ' ಸ್ಮಿತ್ ಮಚ್ಚರ್‌

ಹನುಮಾನ್‌ ಚಾಲೀಸಾ ಪಠಿಸಿಸುತ್ತ ಭಯೋತ್ಪಾದಕ ಸಹ-ಪೈಲಟ್ ಜೊತೆ ಹೋರಾಡಿದ್ದ ‘ಹೀರೋ’ ಸ್ಮಿತ್ ಮಚ್ಚರ್‌

ನವದೆಹಲಿ, ಅ.2: ಫ್ಲೈದುಬೈ ವಿಮಾನ ಹಾರಾಟದ ವೇಳೆ ವಿಮಾನವನ್ನು ಭಾರಿ ಕಟ್ಟಡಕ್ಕೆ ಡಿಕ್ಕಿ ಹೊಡೆಸಲು ಯತ್ನಿಸಿದ ಕೊ ಪೈಲಟ್‌ ಜತೆ ಹೋರಾಡುತ್ತಿದ್ದ ವೇಳೆ ತಾನು ಹನುಮಾನ್‌ ಚಾಲೀಸಾ ಪಠಿಸುತ್ತಿದ್ದೆ ಎಂದು ಪೈಲಟ್‌ ಸಿತ್‌ ಮಚ್ಚರ್‌ ಹೇಳಿದ್ದಾರೆ.

178ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ರಕ್ಷಿಸುವ ಮೂಲಕ ರಾತ್ರೋರಾತ್ರಿ ಹೀರೋ ಆಗಿರುವ ಮಚ್ಚರ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಕುಶಲೋಪರಿ ವಿಚಾರಿಸಿದ ಸಂದರ್ಭದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಕೊ ಪೈಲಟ್‌ ಏಕಾಏಕಿ ವಿಮಾನವನ್ನು ಕೆಳಗಿಳಿಸಲು ಯತ್ನಿಸಿದಾಗ ತಾನು ತಡೆಯಲು ಪ್ರಯತ್ನಿಸಿದೆ. ಆ ಸಂದರ್ಭದಲ್ಲಿ ಆತ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ. ಆಗ ತಾನು ಹನುಮಾನ್‌ ಚಾಲೀಸಾ ಪಠಿಸುತ್ತಲೇ ಆತನೊಂದಿಗೆ ಹೋರಾಡುತ್ತಾ ಕಾಕ್‌ಪಿಟ್‌ ಬಾಗಿಲು ತೆರೆದೆ ಎಂದು ಮಚ್ಚರ್‌ ಅವರು ಮೋದಿ ಅವರಿಗೆ ತಿಳಿಸಿದ್ದಾರೆ.

ಮೋದಿ ಅವರೊಂದಿಗೆ ಮಾತನಾಡುತ್ತಲೇ ಭಾವುಕರಾದ ಸಿತ್‌ ಮಚ್ಚರ್‌, ‘ನೀವೇ ನನ್ನ ಅತಿದೊಡ್ಡ ಆದರ್ಶ ವ್ಯಕ್ತಿ’ ಎಂದು ತಿಳಿಸಿದರು. ಪ್ರಧಾನಿ ಕರೆ ಮಾಡಿದ ಈ ದಿನ ತನಗೆ ಅತ್ಯಂತ ವಿಶೇಷವಾದ ಕ್ಷಣ ಎಂದು ಅವರು ಹೇಳಿದರು. ಈ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಅವರು ಪೈಲಟ್‌ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ಸಂಯಮವನ್ನು ಶ್ಲಾಘಿಸಿದರು. ಇಡೀ ದೇಶವೇ ಅವರಿಗಾಗಿ ಪ್ರಾರ್ಥಿಸುತ್ತಿದೆ ಎಂದು ಹೇಳಿದರು.

RELATED ARTICLES
spot_img

Latest News