ಥಾಣೆ, ಡಿ.19-ಮಹಾರಾಷ್ಟ್ರದ ಥಾಣೆ ನಗರದ ಕ್ಲಬ್‌ವೊಂದರ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಔತಣಕೂಟದ ವೇಳೆ ಬೆಂಕಿ ಅವಘಡದ ಸಂಭವಿಸಿದ್ದು ಸುಮಾರು 1 ಸಾವಿರಕ್ಕೂ ಹೆಚ್ಚು ಅತಿಥಿಗಳು ಅಪಾಯದಿಂದ ಪಾರಾಗಿದ್ದಾರೆ.
ನಗರದ ಘೋಡ್‌ಬಂದರ್ ರಸ್ತೆಯ ಓವಾಲಾ ಪ್ರದೇಶದದಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಡ್ವಿ ಅವರ ಪ್ರಕಾರ, ದಿ ಬ್ಲೂ ರೂಫ್ ಕ್ಲಬ್ ನ ಹುಲ್ಲುಹಾಸಿನ ಕ್ಯಾಬಿನ್‌ನ ಹೊರಗೆ ಇರಿಸಲಾಗಿದ್ದ ಮಂಡಪ ಅಲಂಕಾರ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡಿತು. ಆ ಸಮಯದಲ್ಲಿ ಸ್ಥಳದಲ್ಲಿ ವಿವಾಹ ಆರತಕ್ಷತೆ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ 1,000 ರಿಂದ 1,200 ಅತಿಥಿಗಳು ಸ್ಥಳದಲ್ಲಿ ಜಮಾಯಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿ ಗಮನಿಸಿದ ತಕ್ಷಣ, ಅತಿಥಿಗಳನ್ನು ಹೊರಗೆ ಕರೆದೊಯ್ಯಲಾಯಿತು, ಯಾವುದೇ ಸಾವುನೋವುಗಳನ್ನು ಸಂಭವಿಸದಂತೆ ಎಚ್ಚರಿಕೆಯಿಂದ ಬೆಂಕಿ ನಂದಿಸಲಾಗಿದೆ.
ಒಂದು ದೊಡ್ಡ ದುರಂತವನ್ನು ತಪ್ಪಿಸುವಲ್ಲಿ ಸಕಾಲಿಕ ಜಾಗರೂಕತೆ ಮತ್ತು ತ್ವರಿತ ಸ್ಥಳಾಂತರಿಸುವಿಕೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ,ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.
