Monday, November 25, 2024
Homeಇದೀಗ ಬಂದ ಸುದ್ದಿರೋಜಗಾರ್ ಕ್ರಾಂತಿಗೆ ನಾಂದಿ ಹಾಡಲಿದೆ ಕಾಂಗ್ರೆಸ್ ಗ್ಯಾರಂಟಿ : ಖರ್ಗೆ

ರೋಜಗಾರ್ ಕ್ರಾಂತಿಗೆ ನಾಂದಿ ಹಾಡಲಿದೆ ಕಾಂಗ್ರೆಸ್ ಗ್ಯಾರಂಟಿ : ಖರ್ಗೆ

ನವದೆಹಲಿ, ಮಾ.30 (ಪಿಟಿಐ) – ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಸಕ್ರಿಯಗೊಳಿಸಲು ಮತ್ತು ಯುವಕರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಮೂಲಕ ಕಾಂಗ್ರೆಸ್ ರೋಜ್ಗಾರ್ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.

ಯುವಕರ ಭವಿಷ್ಯವು ಕತ್ತಲಿನಿಂದ ಉಜ್ವಲವಾಗುವುದನ್ನು ಕಾಂಗ್ರೆಸ್ ಖಾತರಿಪಡಿಸುತ್ತದೆ ಎಂದು ಹೇಳಿರುವ ಅವರು ಪಕ್ಷವು ಅಧಿಕಾರಕ್ಕೆ ಬಂದರೆ ಅದನ್ನು ಜಾರಿಗೊಳಿಸುವ ಯುವ ನ್ಯಾಯ ಭರವಸೆಗಳನ್ನು ನೀಡಲಾಗುವುದು ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್ ಪಕ್ಷವು ಯುವ ನ್ಯಾಯ್ ಖಾತರಿಯ ಮೂಲಕ ರೋಜ್ಗಾರ್ ಕ್ರಾಂತಿ (ಉದ್ಯೋಗ ಕ್ರಾಂತಿ)ಗೆ ನಾಂದಿ ಹಾಡಲಿದೆ! ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಸಕ್ರಿಯಗೊಳಿಸಲು ಮತ್ತು ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ನಾವು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಎಕ್ಸ್ ಮಾಡಿದ್ದಾರೆ.

ಭಾರತಿ ಭರೋಸಾ ಗ್ಯಾರಂಟಿ ಅಡಿಯಲ್ಲಿ, ತಮ್ಮ ಪಕ್ಷವು ಉದ್ಯೋಗ ಕ್ಯಾಲೆಂಡರ್ ಪ್ರಕಾರ 30 ಲಕ್ಷ ಹೊಸ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು. ಪೆಹ್ಲಿ ನೌಕ್ರಿ ಪಕ್ಕಿ ಅಂಗವಾಗಿ ಪಕ್ಷವು ಎಲ್ಲಾ ವಿದ್ಯಾವಂತ ಯುವಕರಿಗೆ ವರ್ಷಕ್ಕೆ 1 ಲಕ್ಷ ರೂ.ಗಳಂತೆ ಒಂದು ವರ್ಷದ ಅಪ್ರೆಂಟಿಸ್‍ಶಿಪ್ ಹಕ್ಕನ್ನು ನೀಡುತ್ತದೆ ಎಂದು ಖರ್ಗೆ ಹೇಳಿದರು.

ಪೇಪರ್ ಲೀಕ್ ಸೆ ಮುಕ್ತಿ ಖಾತ್ರಿಯಡಿ, ಎಲ್ಲಾ ಪೇಪರ್ ಸೋರಿಕೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಪಕ್ಷವು ಕಾನೂನನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಪಕ್ಷವು ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಗಿಗ್ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಮತ್ತು ಯುವಕರಿಗೆ 5,000 ಕೋಟಿ ರೂಪಾಯಿಗಳ ಆರಂಭಿಕ ನಿ„ಯನ್ನು ಭರವಸೆ ನೀಡಿದೆ ಎಂದು ಖರ್ಗೆ ತಿಳಿಸಿದರು.

ನಾರಿ ನ್ಯಾಯ್ ಯುವ ನ್ಯಾಯ್ , ಶ್ರಮಿಕ್ ನ್ಯಾಯ್ , ಕಿಸಾನ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಎಂಬ ಐದು ನ್ಯಾಯಗಳ ಅಡಿಯಲ್ಲಿ 25 ಭರವಸೆಗಳ ಮೇಲೆ ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣೆಯನ್ನು ಪಿಚ್ ಮಾಡಿದೆ. ಅಧಿಕಾರಕ್ಕೆ ಬಂದರೆ ಕೂಡಲೇ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

RELATED ARTICLES

Latest News