Tuesday, November 26, 2024
Homeರಾಷ್ಟ್ರೀಯ | Nationalಸಂವಿಧಾನ ಉಳಿಸಲು ಅಲ್ಲ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇಂಡಿಯಾ ರ್‍ಯಾಲಿ : ಸುಧಾಂಶು ತ್ರಿವೇದಿ

ಸಂವಿಧಾನ ಉಳಿಸಲು ಅಲ್ಲ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಇಂಡಿಯಾ ರ್‍ಯಾಲಿ : ಸುಧಾಂಶು ತ್ರಿವೇದಿ

ನವದೆಹಲಿ,ಮಾ.31- ಪ್ರಜಾಪ್ರಭುತ್ವವನ್ನು ರಕ್ಷಿಸಿ, ಕುಟುಂಬಗಳನ್ನು ಉಳಿಸಿ, ಭ್ರಷ್ಟಾಚಾರವನ್ನು ಮುಚ್ಚಿಹಾಕಿ ಎಂಬ ಕಾರಣಕ್ಕೆ ಇಂಡಿಯಾ ರಾಜಕೀಯ ಘಟಬಂಧನ್ ಬೃಹತ್ ರ್ಯಾಲಿ ನಡೆಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿಯ ವಕ್ತಾರ ಸುಧಾಂಶು ತ್ರಿವೇದಿ ರ್ಯಾಲಿಯನ್ನು ಆಯೋಜಿಸುತ್ತಿರುವ ನಾಯಕರುಗಳ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳಿವೆ. ಕಾಂಗ್ರೆಸ್, ಡಿಎಂಕೆ, ಆರ್ಜೆಡಿ ಪಕ್ಷಗಳ ನಾಯಕರು ವಿವಿಧ ಹಗರಣಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕಾರಕ್ಕೆ ಬರುವ ಹಿಂದಿನಿಂದಲೂ ಈ ನಾಯಕರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಂತೆ ಮೋದಿ ಸರ್ಕಾರದ ವಿರುದ್ಧ ರಾಜಕೀಯ ದ್ವೇಷ ಎಂಬ ಟೀಕೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಮೊದಲು ಅಣ್ಣಾ ಹಜಾರೆ ನೇತೃತ್ವದಲ್ಲಿ ಭಾರತ ಭ್ರಷ್ಟಾಚಾರದ ವಿರುದ್ಧ ಎಂಬ ಆಂದೋಲನ ನಡೆಯಿತು. ಇಂದು ಪ್ರತಿಯೊಬ್ಬರೂ ಭ್ರಷ್ಟಾಚಾರದ ಜೊತೆಯಲ್ಲಿ ಎಂಬ ಸಮಾವೇಶ ಮಾಡಲಾಗುತ್ತಿದೆ. ಕಳ್ಳರು, ಮೋಸಗಾರರ ಜೊತೆ ಕೈಜೋಡಿಸಿರುವ ನಾಯಕರು ಒಟ್ಟಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಆಮ್ಆದ್ಮಿ ಪರವಾಗಿ ಜೊತೆಯಾಗಿ ಬಂದಿದ್ದಾರೆ ಎಂದು ಕಿಡಿಕಾರಿದರು. ಲಾಲೂ ಪ್ರಸಾದ್ ಯಾದವ್ ಹಲವು ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಅವರೆಲ್ಲರೂ ತಮ್ಮ ಹಳೆಯ ಪಾಪಗಳನ್ನು ಮುಚ್ಚಿಡಲು ಬಯಸುತ್ತಿದ್ದಾರೆ. ರಾಮಮಂದಿರದ ನಿರ್ಮಾಣದ ವಿರುದ್ಧವಾಗಿ ಮಾತನಾಡಿದ್ದರು. ಕೆಲವರಂತೂ ಹಿಂದುತ್ವವನ್ನು ನಿರ್ಮೂಲನೆ ಮಾಡುವ ಹೇಳಿಕೆ ನೀಡಿದ್ದರು ಎಂದು ಸುಧಾಂಶು ತ್ರಿವೇದಿವಿವರಿಸಿದ್ದಾರೆ.

ಇಂತಹ ರಾಜಕೀಯ ಪಕ್ಷಗಳು ಜನರ ನಂಬಿಕೆ ಕಳೆದುಕೊಂಡರೆ ಬಿಜೆಪಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವಾಸ ಹಾಗೂ ನಂಬಿಕೆಗೆ ಪಾತ್ರವಾಗಿದೆ. ಚುನಾವಣಾ ಕಾಲದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಇದನ್ನು ಸಹಿಸಲಾಗದೆ ವಿರೋಧಪಕ್ಷಗಳ ನಾಯಕರು ವಂಶಪಾರಂಪರ್ಯ ರಾಜಕಾರಣವನ್ನು ಮುಂದುವರೆಸಲು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ಒಟ್ಟಾಗಿ ಸಮಾವೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

RELATED ARTICLES

Latest News