Friday, May 10, 2024
Homeರಾಜ್ಯ"ಮಂಜುನಾಥ್ ಗೆದ್ದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯಾಗಲಿದೆ"

“ಮಂಜುನಾಥ್ ಗೆದ್ದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯಾಗಲಿದೆ”

ಬೆಂಗಳೂರು,ಮಾ.31- ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್. ಮಂಜುನಾಥ್ ಕಣಕ್ಕಿಳಿದಿದ್ದಾರೆ. ಕ್ಷೇತ್ರದ ಮತದಾರರು ಅವರಿಗೆ ಮತ ನೀಡುವ ಮೂಲಕ ಶಕ್ತಿ ತುಂಬಿದರೆ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರುವುದು ನಿಶ್ಚಿತ ಎಂದು ಅನಸೂಯ ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪತಿ ಗೆಲ್ಲುವ ವಿಶ್ವಾಸವಿದೆ. ಕೇಂದ್ರ ಗೃಹ ಸಚಿವ ಅಮಿತ್ಶಾ ಅವರ ಅಪೇಕ್ಷೆ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಧುಮುಕಿದ್ದಾರೆ ಎಂದರು.

ಸ್ಪರ್ಧೆಯ ಬಗ್ಗೆ ಸಂತೋಷವೂ ಇದೆ, ಹಾಗೆಯೇ ನೋವು ಸಹ ಇದೆ. ರಾಜಕೀಯದಲ್ಲಿ ಟೀಕೆ ಬರುತ್ತದೆ ಡಾ.ಮಂಜುನಾಥ್ ಬಹಳ ಸೂಕ್ಷ್ಮ ಮನಸ್ಸಿನವರು. ಚುನಾವಣೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಆತಂಕವಿದೆ ಎಂದು ತಿಳಿಸಿದ್ದಾರೆ.

ಜಯದೇವ ಆಸ್ಪತ್ರೆ ನಿರ್ದೇಶಕರಾಗಿದ್ದಾಗ ಅವರು ದೊಡ್ಡ ಅಭಿಯಾನ ನಡೆಸಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಾಧನೆಯ ಹಿಂದೆ ನನ್ನ ಶಕ್ತಿಯಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರ ಗೆಲುವಿಗೆ ನನ್ನ ಶಕ್ತಿ ಮಾತ್ರ ಸಾಲದು. ರಾಜ್ಯದ ಜನತೆ ಅವರಿಗೆ ತಮ್ಮ ಶಕ್ತಿ ತುಂಬುವ ಅವಶ್ಯಕತೆಯಿದೆ ಎಂದರು.

ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಗೆಲ್ಲಿಸಿದರೆ ಜಯದೇವ ಮಾದರಿಯಲ್ಲಿ ದೇಶದ ಆರೋಗ್ಯ ಕ್ಷೇತ್ರದ ಬದಲಾವಣೆ ತರುವುದು ನಿಶ್ಚಿತ ಎಂದು ಭರವಸೆ ನೀಡಿದರು. ಡಾ.ಮಂಜುನಾಥ್ ಅವರ ಪರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುತ್ತೇನೆ. ಈಗಿನ ಚುನಾವಣೆಯ ಪ್ರಚಾರ ಶೈಲಿ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಮಂಜುನಾಥ್ ಅವರು ಚುನಾ

RELATED ARTICLES

Latest News