Tuesday, April 16, 2024
Homeಬೆಂಗಳೂರುಮದುವೆಗೆ ನಿರಾಕರಿಸಿದ ಪ್ರಿಯತಮೆಗೆ 15 ಬಾರಿ ಇರಿದು ಕೊಂದ

ಮದುವೆಗೆ ನಿರಾಕರಿಸಿದ ಪ್ರಿಯತಮೆಗೆ 15 ಬಾರಿ ಇರಿದು ಕೊಂದ

ಬೆಂಗಳೂರು,ಮಾ.31- ಮದುವೆಗೆ ನಿರಾಕರಿಸಿದ ಪ್ರಿಯತಮೆಯನ್ನು ಆರೋಪಿ ಕತ್ತು ಕೂಯ್ದು 15ಕ್ಕೂ ಹೆಚ್ಚು ಕಡೆ ಇರಿದು ಕೊಲೆ ಮಾಡಿದ್ದಾನೆ ಎಂಬುದು ಜಯನಗರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಗಿರೀಶ ಅಲಿಯಾಸ್ ರಿಯಾನ್ ಖಾನ್(35)ನನ್ನು ಬಂಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಜಯನಗರದ ಶಾಲಿನಿ ಪಾರ್ಕ್ಗೆ ಪ್ರಿಯತಮೆ ಫರೀದಾ ಖಾನ್ಂನನ್ನು ಕರೆದುಕೊಂಡು ಹೋದ ಆರೋಪಿ ಕೆಲಸ ಬಿಟ್ಟು ನನ್ನನ್ನು ಮದುವೆಯಾಗು, ಇಬ್ಬರು ಸೇರಿ ಪ್ರತ್ಯೇಕ ಜೀವನ ನಡೆಸುವ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾನೆ.

ಇದಕ್ಕೆ ಫರೀದಾ ಖಾನಂ (42) ಒಪ್ಪದೆ ಇದ್ದಾಗ ಕೋಪಗೊಂಡ ಆರೋಪಿ, ಚಾಕುವಿನಿಂದ ಆಕೆಯ ಕುತ್ತಿಗೆ ಕೂಯ್ದು, ಮನಬಂದಂತೆ ದೇಹದ 15ಕ್ಕೂ ಹೆಚ್ಚು ಕಡೆ ಇರಿದು ಕೊಲೆ ಮಾಡಿ ಕೊನೆಗೆ ಠಾಣೆಗೆ ಬಂದು ಶರಣಾಗಿದ್ದಾನೆ. ಭೀಕರವಾಗಿ ಕೊಲೆಯಾಗಿರುವ ಫರೀದಾ ಖಾನಂ ಶವ ಪರೀಕ್ಷೆ ನಡೆಸಿ ಶವನ್ನು ವಾರಸುದಾರರಿಗೆ ನೀಡಲಾಗಿದೆ.

RELATED ARTICLES

Latest News