Friday, November 22, 2024
Homeಅಂತಾರಾಷ್ಟ್ರೀಯ | Internationalಸಿರಿಯಾದಲ್ಲಿನ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ದಾಳಿ : ಇಬ್ಬರು ಜನರಲ್‍ಗಳ ಬಲಿ

ಸಿರಿಯಾದಲ್ಲಿನ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ದಾಳಿ : ಇಬ್ಬರು ಜನರಲ್‍ಗಳ ಬಲಿ

ಡಮಾಸ್ಕಸ್(ಸಿರಿಯಾ), ಏ.2- ಇಲ್ಲಿನ ಇರಾನ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಇರಾನಿ ಜನರಲ್‍ಗಳು ಮತ್ತು ಐವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಇರಾನ್‍ನ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾದಲ್ಲಿ ಮತ್ತು ಲೆಬನಾನ್‍ನೊಂದಿಗೆ ಗಡಿಭಾಗದಲ್ಲಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಇರಾನ್‍ನ ಮಿಲಿಟರಿ ಅಧಿಕಾರಿಗಳನ್ನು ಗುರಿಯಾಗಿಸಿ ಇಸ್ರೇಲ್‍ನ ದಾಳಿಗಳು ಹೆಚ್ಚುತ್ತಿರುವ ಈ ಸನ್ನಿವೇಶದಲ್ಲಿ ಈ ದಾಳಿ ಮಹತ್ವ ಪಡೆದಿದೆ.

ಗಾಜಾದಲ್ಲಿ ಸುಮಾರು ಆರು ತಿಂಗಳ ಹಿಂದೆ ಸಮರ ಆರಂಭವಾದಾಗಿನಿಂದ ಲೆಬನಾನ್ ಮೂಲದ ಇರಾನ್ ಬೆಂಬಲಿತ ಉಗ್ರಗಾಮಿಗಳು ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಾಗಿದೆ. ಗಾಜಾ ಆಡಳಿತ ನಡೆಸುತ್ತಿರುವ ಮತ್ತು ಕಳೆದ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಅನ್ನು ಸಹ ಇರಾನ್ ಪ್ರೋತ್ಸಾಹಿಸುತ್ತಿದೆ.

ಇರಾನ್ ಮೇಲೆ ನಡೆಸಿದ ದಾಳಿಗಳನ್ನು ಅಪರೂಪವಾಗಿ ಒಪ್ಪಿಕೊಳ್ಳುವ ಇಸ್ರೇಲ್ ಸಿರಿಯಾದಲ್ಲಿನ ದಾಳಿಯ ಕುರಿತು ಏನೂ ಹೇಳಿಲ್ಲ. ಆದಾಗ್ಯೂ ದಕ್ಷಿಣ ಇಸ್ರೇಲ್‍ನ ನೌಕಾ ನೆಲೆ ಮೇಲೆ ಸೋಮವಾರ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಸೇನಾ ವಕ್ತಾರರೊಬ್ಬರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಿಜ್ಬುಲ್ಲಾದೊಂದಿಗೆ ದಿನನಿತ್ಯ ಗುಂಡಿನ ಚಕಮಕಿ ನಡೆಯುತ್ತಿರುವುದಕ್ಕೆ ಅಸಹಿಷ್ಣುವಾಗಿರುವ ಇಸ್ರೇಲ್ ಇದು ಹೀಗೇ ಮುಂದುವರೆದರೆ ಪೂರ್ಣ ಪ್ರಮಾಣದ ಯುದ್ಧ ನಡೆಸಬೇಕಾದೀತೆಂದು ಎಚ್ಚರಿಕೆ ನೀಡಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸಹ ಇಸ್ರೇಲ್‍ನತ್ತ ಸೋಮವಾರದ್ದೂ ಸೇರಿದಂತೆ ದೂರ ವ್ಯಾಪ್ತಿಯ ಕ್ಷಿಪಣಿ ದಾಳಿಗಳನ್ನು ನಡೆಸುತ್ತಲೇ ಇದ್ದಾರೆ.

ಸಿರಿಯಾದಲ್ಲಿನ ಸೋಮವಾರದ ವಾಯು ದಾಳಿಗೆ ಜನರಲ್ ಮೊಹಮ್ಮದ್ ರೆಝೂ ಜೆಹಾದಿ ಬಲಿಯಾಗಿದ್ದಾರೆ. ಇವರು 2016ರವರೆಗೆ ಲೆಬನಾನ್ ಮತ್ತು ಸಿರಿಯಾದಲ್ಲಿ ಎಲೈಟ್ ಖುದ್ಸ್ ಪಡೆಗಳ ನೇತೃತ್ವ ವಹಿಸಿದ್ದರು. ಅವರ ನಂತರದ ಅಧಿಕಾರಿ ಜನರಲ್ ಮೊಹಮ್ಮದ್ ಹದಿ ಹಜ್ರಿಯಾಹಿಮಿ ಮತ್ತು ಇತರ ಐವರು ಅಧಿಕಾರಿಗಳೂ ಸಾವಿಗೀಡಾಗಿರುವುದಾಗಿ ಇರಾನಿನ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ದಾಳಿಯಲ್ಲಿ ಹಿಜ್ಬುಲ್ಲಾ ಸದಸ್ಯ ಹುಸೇನ್ ಯೂಸೆಫ್ ಕೂಡ ಸತ್ತಿದ್ದಾನೆ ಎಂದು ಉಗ್ರಗಾಮಿ ಸಂಘಟನೆಯ ಓರ್ವ ವಕ್ತಾರ ಅಸೋಸಿಯೇಟೆಡ್ ಪ್ರೆಸ್‍ಗೆ ತಿಳಿಸಿದ್ದಾನೆ.

ದಾಳಿಯಲ್ಲಿ ಇಬ್ಬರು ಸಿರಿಯನ್ನರು ಕೂಡ ಮರಣ ಹೊಂದಿದ್ದಾರೆ ಎಂದು ಬ್ರಿಟನ್‍ನಲ್ಲಿರುವ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಹೇಳಿದೆ. ದೂತಾವಾಸದ ಕಾವಲಿಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳೂ ಸಹ ಹತರಾಗಿದ್ದಾರೆ. ಕ್ಷಿಪ್ರ ಕಾರ್ಯಾಚರಣಾ ಪಡೆಗಳು ಅವಶೇಷಗಳಡಿ ಶೋಧಕಾರ್ಯ ನಡೆಸಿವೆ.

RELATED ARTICLES

Latest News