Homeರಾಷ್ಟ್ರೀಯವಿಜಯದಶಮಿಯಂದು ಆರ್‌ಎಸ್‌‍ಎಸ್‌‍ ವಾರ್ಷಿಕ ಕಾರ್ಯಕ್ರಮಕ್ಕೆ ಜಗದೀಪ್‌ ಧನಖರ್‌ಗೆ ಆಹ್ವಾನ

ವಿಜಯದಶಮಿಯಂದು ಆರ್‌ಎಸ್‌‍ಎಸ್‌‍ ವಾರ್ಷಿಕ ಕಾರ್ಯಕ್ರಮಕ್ಕೆ ಜಗದೀಪ್‌ ಧನಖರ್‌ಗೆ ಆಹ್ವಾನ

ನವದೆಹಲಿ, ಅ.15- (ಪಿಟಿಐ): ಮುಂದಿನ ವಾರ ನಾಗ್ಪುರದಲ್ಲಿ ವಿಜಯದಶಮಿಯಂದು ಆಯೋಜಿಸಲಾಗುವ ಆರ್‌ಎಸ್‌‍ಎಸ್‌‍ನ ವಾರ್ಷಿಕ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಖರ್‌ ಅವರನ್ನು ಆಹ್ವಾನಿಸಲಾಗಿದೆ. ಆರ್‌ಎಸ್‌‍ಎಸ್‌‍ನ ಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ವಿಜಯದಶಮಿಯಂದು ಆಯೋಜಿಸಲಾಗುವ ಈ ಕಾರ್ಯಕ್ರಮಕ್ಕೆ, ಅತಿಥಿಯಾಗಿ ಧನಖರ್‌ ಅವರನ್ನು ಆಹ್ವಾನಿಸಲಾಗಿದೆ ಎಂದು ಆರ್‌ಎಸ್‌‍ಎಸ್‌‍ ತಿಳಿಸಿದೆ.

ಅಕ್ಟೋಬರ್‌ 20 ರಂದು ನಾಗ್ಪುರದ ರೇಷಿಮ್‌ಬಾಗ್‌‍ ಮೈದಾನದಲ್ಲಿ ನಡೆಯಲಿರುವ ಈ ವರ್ಷದ ಕಾರ್ಯಕ್ರಮವು, ಆರ್‌ಎಸ್‌‍ಎಸ್‌‍ನ ಶತಮಾನೋತ್ಸವ ವರ್ಷದ ಸಮಾರೋಪವನ್ನೂ ಸೂಚಿಸುತ್ತದೆ.ಈ ಕಾರ್ಯಕ್ರಮದಲ್ಲಿ ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾಷಣ ಮಾಡಲಿದ್ದು, ದೈನಿಕ ಜಾಗರಣ್‌‍ನ ಪ್ರಧಾನ ಸಂಪಾದಕ ಸಂಜಯ್‌ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘವು ತಿಳಿಸಿದೆ.

ಈ ವರ್ಷ, ಸಂಘದ ಶತಮಾನೋತ್ಸವ ವರ್ಷದ ಸಮಾರೋಪವನ್ನು ಸೂಚಿಸುವ ವಿಜಯದಶಮಿ ಆಚರಣೆಗೆ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಖರ್‌ ಮತ್ತು ಮಧ್ಯ-ಪಶ್ಚಿಮ ಭಾರತ ಪ್ರದೇಶಕ್ಕಾಗಿ ಇಸ್ರೇಲ್‌ನ ಕಾನ್ಸುಲ್‌ ಜನರಲ್‌ ಯಾನಿವ್‌ ರೆವಾಚ್‌ ಅವರನ್ನು ಆಹ್ವಾನಿಸಲಾಗಿದೆ ಎಂದು ಆರ್‌ಎಸ್‌‍ಎಸ್‌‍ ಹೇಳಿದೆ. ಈ ಕಾರ್ಯಕ್ರಮಕ್ಕೆ ಧನಖರ್‌ ಅವರನ್ನು ಆಹ್ವಾನಿಸಿರುವುದನ್ನು ಮುಂದಿಟ್ಟುಕೊಂಡು, ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ ಕಾಂಗ್ರೆಸ್‌‍, ಈ ವ್ಯವಸ್ಥೆಯು (ಎಕೋಸಿಸ್ಟಮ್‌‍) ತನ್ನೊಂದಿಗೆ ತಾನೇ ಸಂಘರ್ಷದಲ್ಲಿ ತೊಡಗಿದೆ ಎಂದು ಟೀಕಿಸಿದೆ.

ಆರ್‌ಎಸ್‌‍ಎಸ್‌‍ನಿಂದ ಧನಖರ್‌ ಅವರಿಗೆ ಆಹ್ವಾನ ಬಂದಿದ್ದರೂ, ಕಳೆದ ವರ್ಷ ಜುಲೈನಲ್ಲಿ ಅವರು ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದ ನಂತರ, ಅವರಿಗೆ ಸಿಗಬೇಕಾದ ಅಧಿಕೃತ ನಿವಾಸವನ್ನು ಸರ್ಕಾರ ಇನ್ನೂ ಒದಗಿಸಿಲ್ಲ ಎಂದು ಕಾಂಗ್ರೆಸ್‌‍ ಮುಖಂಡ ಜೈರಾಮ್‌ ರಮೇಶ್‌ ಎಕ್ಸ್ ಮಾಡಿದ್ದಾರೆ.

RELATED ARTICLES
spot_img

Latest News