Homeರಾಜ್ಯತನ್ನ ಹೆಸರನ್ನೂ ಬರೆಯಲು ಬರದವನಿಗೆ ಸರ್ಕಾರಿ ಉದ್ಯೋಗ : ಕೆಪಿಎಸ್‌‍ಸಿ ಕರ್ಮಕಾಂಡ

ತನ್ನ ಹೆಸರನ್ನೂ ಬರೆಯಲು ಬರದವನಿಗೆ ಸರ್ಕಾರಿ ಉದ್ಯೋಗ : ಕೆಪಿಎಸ್‌‍ಸಿ ಕರ್ಮಕಾಂಡ

ಬೆಂಗಳೂರು,ಅ.16-ಕೆಪಿಎಸ್‌‍ಸಿ ಹಗರಣದ ಮತ್ತೊಂದು ಕರ್ಮಕಾಂಡ ಇ.ಡಿ ತನಿಖೆಯಿಂದ ಬೆಳಕಿಗೆ ಬಂದಿದ್ದು, ಇಂಗ್ಲೀಷ್‌ನಲ್ಲಿ ತನ್ನ ಹೆಸರೇ ಬರೆಯಲು ಬಾರದವನಿಗೆ ಸರ್ಕಾರಿ ಉದ್ಯೋಗ ಲಭಿಸಿರುವುದು ಬಟಾಬಯಲಾಗಿದೆ.ಪರೀಕ್ಷೆ ಬರೆಯುವ ಮುನ್ನವೇ ಅಭ್ಯರ್ಥಿಗಳಿಗೆ ಉತ್ತರಗಳನ್ನು ಚೀಟಿಗಳಲ್ಲಿ ಬರೆದು ನೀಡಲಾಗಿತ್ತು. ಒಂದು ವೇಳೆ ಆ ಚೀಟಿ ನೋಡಿ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗಾಗಿಯೇ ಪ್ರತ್ಯೇಕ ಸಂಚು ರೂಪಿಸಿ ಫೈವ್‌ಸ್ಟಾರ್‌ ಹೋಟೆಲ್‌ ಕೊಠಡಿಯಲ್ಲಿ ರಹಸ್ಯವಾಗಿ ಪ್ರಶ್ನೆ ಪತ್ರಿಕೆ ಮತ್ತು ಓಎಮ್‌ಆರ್‌ ಶೀಟ್‌ಗಳನ್ನು ನೋಡಿ ಪರೀಕ್ಷೆ ಬರೆಸಲಾಗಿದೆ.

ಆ ಓಎಮ್‌ಆರ್‌ ಶೀಟ್‌ಗಳನ್ನು ಜ್ಞಾನೇಂದ್ರ ಮೂಲಕ ರಹಸ್ಯವಾಗಿ ಯಾರಿಗೂ ಅನುಮಾನ ಬಾರದಂತೆ ಮುಖ್ಯ ಪಟ್ಟಿಗಳಿಗೆ ಸೇರ್ಪಡೆಗೊಳಿಸಿ ಮೌಲ್ಯ ಮಾಪನ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ.

ಈ ಅಕ್ರಮ ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ, ಇಂಗ್ಲೀಷ್‌ನಲ್ಲಿ ಕನಿಷ್ಠ ತನ್ನ ಹೆಸರು ಮತ್ತು ವಿಳಾಸವನ್ನು ಬರೆಯಲು ಬಾರದ ಅಭ್ಯರ್ಥಿಯೊಬ್ಬನಿಗೆ ಸರ್ಕಾರಿ ಉದ್ಯೋಗ ಲಭಿಸಿರುವುದು ಗಮನಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳೇ ಒಂದು ಕ್ಷಣ ಶಾಕ್‌ ಆಗಿದ್ದಾರೆ.

ಈ ಹಗರಣದ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿರುವ ಇ.ಡಿ ಅಧಿಕಾರಿಗಳು, ಈ ಹಗರಣದಲ್ಲಿ ಹೋಟೇಲ್‌ ಸಿಬ್ಬಂದಿ, ಕೆಪಿಎಸ್‌‍ಸಿ ಸದಸ್ಯರು, ಪ್ರಭಾವ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.ಒಟ್ಟಾರೆ ಪಶುವೈದ್ಯಾಧಿಕಾರಿ ಅಕ್ರಮದ ಬೆನ್ನಲ್ಲೇ ಒಂದೊಂದೇ ಹಗರಣಗಳು ಬಯಲಾಗುತ್ತಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಮತ್ತಷ್ಟು ತನಿಖೆಯಿಂದ ಹೊರ ಬರುವ ಸಾಧ್ಯತೆ ಇದ್ದು, ಕಾದು ನೋಡಬೇಕಿದೆ.

RELATED ARTICLES
spot_img

Latest News