Homeಕ್ರೀಡಾ ಸುದ್ದಿಇಂಡೋ-ವಿಂಡೀಸ್‌‍ ಟಿ-20 ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು

ಇಂಡೋ-ವಿಂಡೀಸ್‌‍ ಟಿ-20 ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು

ಬೆಂಗಳೂರು,ಅ.16- ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಮತ್ತು ವೆಸ್ಟ್‌ ಇಂಡೀಸ್‌‍ ನಡುವಿನ ರೋಚಕ ಟಿ-20 ಕ್ರಿಕೆಟ್‌ ಪಂದ್ಯಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.ಪಂದ್ಯದ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರ ದಟ್ಟಣೆ ಉಂಟಾಗದಂತೆ ತಡೆಯಲು ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಲು ಬೆಂಗಳೂರು ಸಂಚಾರ ಪೊಲೀಸರು ಬಿಗಿ ಭದ್ರತೆ ಹಾಗೂ ಕಾವಲು ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಪಂದ್ಯದ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಬಾಳೇಕುಂದ್ರಿ ವೃತ್ತ, ಕ್ವೀನ್‌್ಸ ವೃತ್ತ ಮತ್ತು ಸಿಟಿಒ ಜಂಕ್ಷನ್‌ ನಡುವಿನ ಕ್ವೀನ್‌್ಸ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ. ಕ್ವೀನ್‌್ಸ ವೃತ್ತದಿಂದ ಅನಿಲ್‌ ಕುಂಬ್ಳೆ ವೃತ್ತದವರೆಗಿನ ಎಂಜಿ ರಸ್ತೆ, ಎಂಜಿ ರಸ್ತೆ ಮತ್ತು ಕಬ್ಬನ್‌ ರಸ್ತೆ ನಡುವಿನ ಸಂಪರ್ಕ ರಸ್ತೆ ಹಾಗೂ ಲೋಕ ಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್‌‍ ಕೋರ್ಸ್‌ ರಸ್ತೆ ಮತ್ತು ಸೆಂಟ್ರಲ್‌ ಸ್ಟ್ರೀಟ್‌ನಲ್ಲಿಯೂ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ.

ಇದರೊಂದಿಗೆ, ಸಿಟಿಒ ವೃತ್ತದಿಂದ ಮಣಿಪಾಲ್‌ ವೃತ್ತದವರೆಗಿನ ಕಬ್ಬನ್‌ ರಸ್ತೆ, ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಡಿಕೆನ್ಸನ್‌ ಜಂಕ್ಷನ್‌ವರೆಗಿನ ರಸ್ತೆ, ಕಾಮರಾಜ್‌ ರಸ್ತೆ ಹಾಗೂ ಸೇಂಟ್‌ ಮಾರ್ಕ್‌ಸ್‌‍ ರಸ್ತೆಯ ನಿರ್ದಿಷ್ಟ ಭಾಗಗಳಲ್ಲಿಯೂ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.

ಮ್ಯೂಸಿಯಂ ಕ್ರಾಸ್‌‍ ರಸ್ತೆ, ಕಸ್ತೂರಿಬಾ ರಸ್ತೆ, ಕಿಂಗ್‌ ರಸ್ತೆ, ಲ್ಯಾವೆಲ್ಲೆ ರಸ್ತೆ ಮತ್ತು ವಿಠಲ್‌ ಮಲ್ಯ ರಸ್ತೆಯ ಕೆಲವು ಭಾಗಗಳಲ್ಲಿಯೂ ನಿರ್ಬಂಧಗಳು ಜಾರಿಯಲ್ಲಿರಲಿವೆ. ಕಬ್ಬನ್‌ ಪಾರ್ಕ್‌ ಒಳಭಾಗದಲ್ಲಿ ಹಾಗೂ ಪ್ರೆಸ್‌‍ ಕ್ಲಬ್‌ ಮತ್ತು ಬಾಲಭವನದ ಮುಂಭಾಗದಲ್ಲಿಯೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಗೊತ್ತುಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ :
ಪ್ರೇಕ್ಷಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಲು ಗೊತ್ತುಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಸೇಂಟ್‌ ಜೋಸೆಫ್‌್ಸ ಇಂಡಿಯನ್‌ ಹೈಸ್ಕೂಲ್‌ ಸೇರಿದಂತೆ ನಿಗದಿತ ಪಾರ್ಕಿಂಗ್‌ ಸ್ಥಳಗಳು ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ಕಾರ್ಯನಿರ್ವಹಿಸಲಿವೆ. ಇತರ ಪಾರ್ಕಿಂಗ್‌ ಸ್ಥಳಗಳ ವಿವರ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದ ಸೂಚನೆಗಳನ್ನು ಸಂಚಾರ ಪೊಲೀಸರ ಅಧಿಕೃತ ಪ್ರಕಟಣೆಯ ಮೂಲಕ ಖಚಿತಪಡಿಸಿಕೊಳ್ಳುವುದು ಸೂಕ್ತ.

RELATED ARTICLES
spot_img

Latest News