Homeರಾಜ್ಯಅರಮನೆಯಲ್ಲಿ ರಾಜಪರಂಪರೆಯ ಸಂಭ್ರಮ : ಅಂಬಾ ವಿಲಾಸದಲ್ಲಿ ಸಂಪ್ರದಾಯದ ಸಡಗರ

ಅರಮನೆಯಲ್ಲಿ ರಾಜಪರಂಪರೆಯ ಸಂಭ್ರಮ : ಅಂಬಾ ವಿಲಾಸದಲ್ಲಿ ಸಂಪ್ರದಾಯದ ಸಡಗರ

ಮೈಸೂರು,ಅ.21- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ವಿಜಯದಶಮಿ ಹಿನ್ನೆಲೆಯಲ್ಲಿ ರಾಜಪರಂಪರೆಯ ಸಂಭ್ರಮ, ಅಂಬಾ ವಿಲಾಸ ಅರಮನೆಯಲ್ಲಿ ಸಂಪ್ರದಾಯ ಪೂಜಾ ಕಾರ್ಯಗಳು ನೆರವೇರಿದವು. ರಾಜ ಪರಂಪರೆಯಂತೆ ವಿಜಯದಶಮಿ ದಿನದ ವಿಶೇಷ ಪೂಜಾ ವಿಧಿ ವಿಧಾನಗಳು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯ ನಡೆದವು.ಬೆಳಗ್ಗೆ ಶುಭ ಮುಹೂರ್ತದಲ್ಲಿ ಅರಮನೆಯ ಖಾಸಗಿ ದರ್ಬಾರ್‌ ಹಾಲ್‌ನಲ್ಲಿ ದೇವತಾ ಪೂಜೆ, ನವರಾತ್ರಿ ಪೂಜೆಯ ಕೊನೆಯ ದಿನದ ವಿಶೇಷ ಅಲಂಕಾರ ಪೂಜೆ ನೆರವೇರಿತು. ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಂಪ್ರದಾಯದಂತೆ ರಾಜ ಉಡುಪು ಧರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ, ಹಸುವಿನ ಆಗಮನ :
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಆಗಮನವಾಯಿತು. ಅರಮನೆಯ ಆವರಣದಲ್ಲಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ರಾಜವಂಶಸ್ಥರಿಂದ ಶಮಿ ಪೂಜೆ ನೆರವೇರಿತು. ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸುವುದು ವಿಜಯದಶಮಿಯ ಪ್ರಮುಖ ಸಂಪ್ರದಾಯವಾಗಿದ್ದು, ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ವಿಜಯಯಾತ್ರೆ ನೆರವೇರಿಸಲಾಯಿತು.

ಆಯುಧ ಪೂಜೆ, ರಥ ಪೂಜೆಗಳ ನಂತರ ಸಂಜೆ ಬಳಿಕ ಕಂಕಣ ವಿಸರ್ಜನೆಯೊಂದಿಗೆ ಅರಮನೆಯ ದಸರಾ ಸಂಪನ್ನಗೊಳ್ಳಲಿದೆ. ಬಳಿಕ ಸಂಜೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ರಾಜವಂಶಸ್ಥರು ಚಾಲನೆ ನೀಡಿದರು.

RELATED ARTICLES
spot_img

Latest News