Homeರಾಜ್ಯಮೈಸೂರು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

ಮೈಸೂರು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

ಮೈಸೂರು,ಅ.21- ನಾಡಹಬ್ಬ ಮೈಸೂರು ದಸರಾದ ಖಾಸಗಿ ದರ್ಬಾರ್‌ನ ಪ್ರಮುಖ ಆಕರ್ಷಣೆಯಾದ ಐತಿಹಾಸಿಕ ಜಟ್ಟಿ ಕಾಳಗ ಈ ಬಾರಿ ರದ್ದಾಗಿದೆ.

ಶಮಿ ಪೂಜೆಯಿಂದ ವಾಪಸಾದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅರಮನೆಗೆ ಹಿಂದಿರುಗಿದ ಬೆನ್ನಲ್ಲೇ ಜಟ್ಟಿ ಕಾಳಗ ರದ್ದಾಗಿದೆ. ರಾಜ ಮನೆತನದವರನ್ನು ಮನವೊಲಿಸಲು ಯತ್ನ ನಡೆದರೂ ಪ್ರಯೋಜನವಾಗಲಿಲ್ಲ.

ಮುಹೂರ್ತ ಮೀರಿದ್ದೇ ಕಾರಣ :
ನಿಗದಿತ ಮುಹೂರ್ತ ಮೀರಿದ್ದರಿಂದ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವುದು ವಿಷಾದನೀಯ ಸಂಗತಿ.

ಪೊಲೀಸರ ವಿರುದ್ಧ ಆಕ್ರೋಶ :
ಕಾಳಗ ರದ್ದಾಗಲು ಪೊಲೀಸರ ಅಡಚಣೆಯೇ ಕಾರಣ ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಾಲಕ್ಕೆ ಪ್ರವೇಶ ಕಲ್ಪಿಸಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದಿತ್ತು. ಆದರೆ ಪೊಲೀಸರು ಸರಿಯಾದ ಸಮಯಕ್ಕೆ ಒಳಗೆ ಬಿಡದ ಕಾರಣ ಮುಹೂರ್ತ ಮೀರಿತು ಎಂದು ಪೈಲ್ವಾನರು ಪೊಲೀಸರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES
spot_img

Latest News