Homeರಾಜ್ಯಜಂಬೂಸವಾರಿ ; ಸಾಂಸ್ಕೃತಿಕ ನಗರಿಯಲ್ಲಿ ಪೊಲೀಸರು ಅಲರ್ಟ್

ಜಂಬೂಸವಾರಿ ; ಸಾಂಸ್ಕೃತಿಕ ನಗರಿಯಲ್ಲಿ ಪೊಲೀಸರು ಅಲರ್ಟ್

ಮೈಸೂರು,ಅ.21- ವಿಜಯದಶಮಿ ಜಂಬೂಸವಾರಿ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗಿನ ರಾಜಬೀದಿಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಹಿರಿಯ ಅಧಿಕಾರಿಗಳು, ಡಿವೈಎಸ್ಪಿ, ಎಸಿಪಿ, ಇನ್ಸ್ ಪೆಕ್ಟರ್‌ಗಳು ಸೇರಿದಂತೆ ಸಾವಿರಾರು ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೋಂ ಗಾರ್ಡ್ಸ್ , ಕೆಎಸ್‌‍ಆರ್‌ಪಿ, ಸಿಎಆರ್‌ ತುಕಡಿ ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗೂ ಭದ್ರತೆಯ ಹೊಣೆ ನೀಡಲಾಗಿತ್ತು.

ಜಂಬೂಸವಾರಿ ಸಾಗುವ ಮಾರ್ಗದ ಉದ್ದಕ್ಕೂ 150 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗಿತ್ತು. ಅರಮನೆಯ ಎಲ್ಲಾ ಪ್ರವೇಶ ದ್ವಾರಗಳಲ್ಲೂ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು.

RELATED ARTICLES
spot_img

Latest News