ನಿತ್ಯ ನೀತಿ : ಹೂವುಗಳ ಸುಗಂಧ ಗಾಳಿ ಬೀಸುವ ದಿಕ್ಕಿನಲ್ಲಷ್ಟೇ ಹರಡುತ್ತದೆ. ಆದರೆ, ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಿಗೂ ಪಸರಿಸುತ್ತದೆ.
ಪಂಚಾಂಗ : ಶನಿವಾರ, 06-04-2024
ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಶತಭಿಷಾ / ಯೋಗ: ಶುಭ / ಕರಣ: ಗರಜೆ
ಸೂರ್ಯೋದಯ : ಬೆ.06.13
ಸೂರ್ಯಾಸ್ತ : 06.32
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿಭವಿಷ್ಯ :
ಮೇಷ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.
ವೃಷಭ: ಉದ್ಯೋಗದಲ್ಲಿ ಹೆಚ್ಚು ಒತ್ತಡ. ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಾಗಲಿದೆ.
ಮಿಥುನ: ವಾಗ್ವಾದದಲ್ಲಿ ನಿಮ್ಮನ್ನು ಮೀರಿಸುವವರೇ ಇಲ್ಲ. ಹೊಸ ಗೆಳೆಯರ ಪರಿಚಯವಾಗಲಿದೆ.
ಕಟಕ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ಸಿಂಹ: ಉತ್ತಮ ಅವಕಾಶ ಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.
ಕನ್ಯಾ: ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ದುರಾಲೋಚನೆಯು ನಿಮ್ಮ ದಾರಿ ತಪ್ಪಿಸಬಹುದು.
ತುಲಾ: ಮಗನ ಆರೋಗ್ಯ ದಲ್ಲಿ ಉಂಟಾಗುವ ವ್ಯತ್ಯಾಸ ದಿಂದಾಗಿ ಬೇಸರವಾಗಲಿದೆ.
ವೃಶ್ಚಿಕ: ಕಾನೂನಿಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.
ಧನುಸ್ಸು: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಸುವಿರಿ.
ಮಕರ: ಹಿರಿಯ ಅಧಿಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.
ಕುಂಭ: ಕಹಿ ಘಟನೆಗಳು ಮರುಕಳಿಸದಂತೆ ನೋಡಿ ಕೊಳ್ಳಿ. ಹಿರಿಯರ ಮಾತುಗಳನ್ನು ಗೌರವಿಸಿ.
ಮೀನ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.