ಮೇದಿನಿನಗರ,ಅ.10-ಜಾರ್ಖಂಡ್‍ನ ಪಲಮು ಜಿಲ್ಲೆಯ 150 ವರ್ಷಗಳಷ್ಟು ಹಳೆಯದಾದ ದೇವಾಲಯದಿಂದ ಕಳವು ಮಾಡಲಾದ ಅಮೂಲ್ಯ ವಿಗ್ರಹವನ್ನು ಗರ್ವಾ ಜಿಲ್ಲೆಯಿಂದ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ಮೇದಿನಿನಗರದ ಕೋಯೆಲ್ ನದಿಯ ದಡದಲ್ಲಿರುವ ಪ್ರಸಿದ್ಧ ದೇವಾಲಯದಿಂದ ಅಷ್ಟಧಾತುವಿನಿಂದ ಮಾಡಿದ ಲಡ್ಡು ಗೋಪಾಲನ ವಿಗ್ರಹ ಮತ್ತು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಬೆಳ್ಳಿಯ ಕಿರೀಟಗಳನ್ನು ಸೆಪ್ಟೆಂಬರ್ 11 ರ ರಾತ್ರಿ ಕಳವು ಮಾಡಲಾಗಿತ್ತು.
ದೇಗುಲದ ಅರ್ಚಕ ಸುನೀಲ್ ಕುಮಾರ್ ಚೌಬೆ ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ರೀಷ್ಮಾ ರಮೇಶ ತಿಳಿಸಿದ್ದಾರೆ.
ದೆಹಲಿಯಲ್ಲಿ ಗುಂಪು ಘರ್ಷಣೆಗೆ ಇಬ್ಬರು ಬಲಿ, ಮತ್ತೊಬ್ಬ ಗಂಭೀರ
ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಆರೋಪಿ ದಿಲ್ಕಾಶ್ ರೋಷನ್ (30) ನನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಬಂಧಿಸಲಾಗಿದೆ.
ರೋಷನ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗರ್ವಾದಲ್ಲಿರುವ ದಂತ ವೈದ್ಯಕೀಯ ಕಾಲೇಜಿನ ಮುಖ್ಯ ಗೇಟ್‍ನ ಪಕ್ಕದಲ್ಲಿ ಹೂತಿಟ್ಟಿದ್ದ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಕದ್ದ ಕಿರೀಟಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಹದಿನೈದು ದಿನಗಳ ಹಿಂದೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸುರ್ಜೀತ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಇಬ್ಬರಲ್ಲಿ ರೋಷನ್‍ನ ಸಹಚರ ಎಂಡಿ ಸೊಹೈಲ್ ಮತ್ತು ಬಿಹಾರದ ಸಸಾರಾಮ್‍ನಲ್ಲಿ ಆಭರಣ ವ್ಯಾಪಾರಿ ಉಪೇಂದ್ರ ಕುಮಾರ್ ಸೇಠ್ ಸೇರಿದ್ದಾರೆ. ಸೊಹೈಲ್ ಮತ್ತು ರೋಷನ್ ಕಿರೀಟಗಳನ್ನು ಆಭರಣ ವ್ಯಾಪಾರಿಗೆ ಮಾರಾಟ ಮಾಡಿದ್ದರು.