ನವದೆಹಲಿ,ಅ.10- ತೀವ್ರ ಜ್ವರದಿಂದ ಬಳಲುತ್ತಿರುವ ಭಾರತದ ಯಶಸ್ವಿ ಆರಂಭಿಕ ಆಟಗಾರ ಶುಭ್‍ಮನ್‍ಗಿಲ್ ಬಹುನಿರೀಕ್ಷಿತ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯಕ್ಕೂ ಲಭ್ಯವಾಗುವ ಸಾಧ್ಯತೆಗಳು ಕ್ಷೀಣಿಸಿದೆ.
ಪ್ರಸ್ತುತ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಿಲ್‍ಗೆ ವೈಟ್‍ಪ್ಲೇಟ್ಸ್(ಬಿಳಿರಕ್ತ ಕಣಗಳು) ಸಂಖ್ಯೆ ಕಡಿಮೆಯಾಗಿದ್ದು, ಇನ್ನೂ ಕೆಲವು ದಿನ ಅವರು ವಿಶ್ರಾಂತಿ ಪಡೆಯಬೇಕಿದ್ದು, ವೈದ್ಯರು ಸೂಚಿಸಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.
24 ವರ್ಷದ ಗಿಲ್ ನಾಳೆ ಆಫ್ಘಾನಿಸ್ತಾನದ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸೇರ್ಪಡೆಯಾಗಲು ಉತ್ಸುಕತೆ ತೋರಿದ್ದರು. ಆದರೆ ಡೆಂಗ್ಯೂವಿನಿಂದ ಅವರ ಬಿಳಿರಕ್ತ ಕಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂತಹ ಸಂದರ್ಭದಲ್ಲಿ ಪಂದ್ಯವಾಡುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ವೈದ್ಯರು ಸಲಹೆ ಮಾಡಿದ್ದಾರೆ.
ಎಎಪಿ ಶಾಸಕ ಅಮಾನತುಲ್ಲಾ ಖಾನ್ ನಿವಾಸದ ಮೇಲೆ ಇಡಿ ದಾಳಿ
ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿರುವ ಗಿಲ್ ಅಹಮದಾಬಾದ್‍ನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯನ್ನು ವೈದ್ಯರು ಖಚಿತವಾಗಿ ಹೇಳಿಲ್ಲ. ಚೆನ್ನೈನ ಕಾವೇರಿ ಆಸ್ಪತ್ರೆಯ ತಜ್ಞ ಡಾ.ರಿಜ್ವಾನ್‍ಖಾನ್ ಅವರು ಚಿಕಿತ್ಸೆ ನೀಡುತ್ತಿದ್ದು, ಬಿಳಿರಕ್ತ ಕಣಗಳು ಎಷ್ಟು ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದರ ಮೇಲೆ ಅವರು ಪಂದ್ಯಕ್ಕೆ ಮರಳುವ ಬಗ್ಗೆ ಹೇಳಬಹುದು. ಆದರೆ ಸದ್ಯಕ್ಕೆ ಬುಧವಾರದವರೆಗೂ ಪಂದ್ಯವಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಗಿಲ್ ಗೈರಾದರೆ ಇಶಾಂತ್ ಕಿಶಾನ್ ಬದಲಿಗೆ ರೋಹಿತ್ ಶರ್ಮ ಜೊತೆ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಬಿಸಿಸಿಐ ತೀರ್ಮಾನಿಸಿದೆ.