Homeಮನರಂಜನೆಗುಂಡಿನ ದಾಳಿ ಬೆನ್ನಲ್ಲೇ ಅಪಾರ್ಟ್‌ಮೆಂಟ್‌ ಮಾರಾಟ ಮಾಡಿದ ಟೈಗರ್‌ ಶ್ರಾಫ್‌

ಗುಂಡಿನ ದಾಳಿ ಬೆನ್ನಲ್ಲೇ ಅಪಾರ್ಟ್‌ಮೆಂಟ್‌ ಮಾರಾಟ ಮಾಡಿದ ಟೈಗರ್‌ ಶ್ರಾಫ್‌

ಮುಂಬೈ, ಅ.25- ಗುಂಡಿನ ದಾಳಿ ಘಟನೆ ಬಳಿಕ ನಟ ಟೈಗರ್‌ ಶ್ರಾಫ್‌ ಮುಂಬೈನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ ಅನ್ನು ಮಾರಾಟ ಮಾಡಿದ್ದಾರೆ. ನಟ ಟೈಗರ್‌ ಶ್ರಾಫ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆದಿತ್ತು. ಈ ಘಟನೆಯಿಂದ ಸೆಲೆಬ್ರಿಟಿಗಳು, ಕುಟುಂಬದವರು ಹಾಗೂ ಅಭಿಮಾನಿಗಳಿಗೆ ತೀವ್ರ ಆತಂಕ ಉಂಟಾಗಿತ್ತು.

ಈ ಬೆನ್ನಲ್ಲೇ ಮುಂಬೈನ ಕಾರ್ಟರ್‌ ರಸ್ತೆಯಲ್ಲಿರುವ ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್‌ ಅನ್ನು 9 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ರಿಯಲ್‌ ಎಸ್ಟೇಟ್‌ ಡೇಟಾ ವಿಶ್ಲೇಷಣಾ ಸಂಸ್ಥೆ ಸಿಆರ್‌ಇ ಮ್ಯಾಟ್ರಿಕ್ಸ್‌ ಹಂಚಿಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳಿಂದ ಈ ಮಾಹಿತಿ ಲಭ್ಯವಾಗಿದೆ.

ದಾಖಲೆಗಳ ಪ್ರಕಾರ, ಈ ಅಪಾರ್ಟ್‌ಮೆಂಟ್‌ ಕಾರ್ಟರ್‌ ರಸ್ತೆಯ ರುಸ್ತುಮ್‌ಜೀ ಪ್ಯಾರಾಮೌಂಟ್‌ ಡೀ ಕೋ-ಆಪರೇಟಿವ್‌ ಹೌಸಿಂಗ್‌ ಸೊಸೈಟಿಯ 9ನೇ ಮಹಡಿಯಲ್ಲಿದ್ದು, ಪ್ರತಿ ಚದರ ಅಡಿಗೆ ಸುಮಾರು 64,891 ರೂ. ಮೌಲ್ಯವಿದೆ. 54 ಲಕ್ಷ ರೂ. ಸ್ಟಾಂಪ್‌ ಡ್ಯೂಟಿ ಪಾವತಿಸಲಾಗಿದೆ. ಅ.22ರಂದು ಮಾರಾಟದ ಅಧಿಕೃತ ನೋಂದಣಿಯಾಗಿದೆ.

ಟೈಗರ್‌ ಶ್ರಾಫ್‌ ಅವರು 2018ರ ಜುಲೈನಲ್ಲಿ ಕ್ರಿಸ್ಟೋನ್‌ ರಿಯಾಲ್ಟರ್ಸ್‌ ಪ್ರೈ.ಲಿ. ಡೆವಲಪರ್‌ಗಳಿಂದ 7.61 ಕೋಟಿ ರೂ.ಗೆ ಈ ಫ್ಲಾಟ್‌ ಖರೀದಿಸಿದ್ದರು. ಟೈಗರ್‌ ಶ್ರಾಫ್‌ ಅವರು ಇದೇ ಕಟ್ಟಡದಲ್ಲಿ ಆಸ್ತಿ ಮಾರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಅವರು 22ನೇ ಮಹಡಿಯಲ್ಲಿದ್ದ ಮತ್ತೊಂದು ಅಪಾರ್ಟ್‌ಮೆಂಟ್‌ ಅನ್ನು ಮಾರಾಟ ಮಾಡಿ ಶೇ.31ರಷ್ಟು ಲಾಭ ಗಳಿಸಿದ್ದರು. ಅ.18ರ ಸಂಜೆ ಜುಹು ಪ್ರದೇಶದಲ್ಲಿ ಬಂದ ದುಷ್ಕರ್ಮಿಗಳು ಟೈಗರ್‌ ಶ್ರಾಫ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

RELATED ARTICLES
spot_img

Latest News