Homeಜಿಲ್ಲಾ ಸುದ್ದಿಗಳುಸಾಲಬಾಧೆ : ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ತಾಯಿ ಮತ್ತು ಓರ್ವ ಮಗು ಸಾವು

ಸಾಲಬಾಧೆ : ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ತಾಯಿ ಮತ್ತು ಓರ್ವ ಮಗು ಸಾವು

ಹುಬ್ಬಳ್ಳಿ: ಸಾಲಬಾಧೆ ತಾಳಲಾರದೆ ಮೂವರು ಪುತ್ರಿಯರಿಗೆ ನುಸಿ ಗುಳಿಗೆ ನುಂಗಿಸಿದ್ದಲ್ಲದೇ, ತಾನೂ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಪೈಕಿ, ಇಬ್ಬರು ಹುಬ್ಬಳ್ಳಿಯ ಕೆಎಂಸಿಆರ್‌ ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕರಡಿಗುಡ್ಡ ಗ್ರಾಮದ ಸವಿತಾ ಮಲ್ಲಿಕಾರ್ಜುನ ಕುರುಗುಂದ (33) ಮತ್ತು ಪುತ್ರಿ ನಿವೇದಿತಾ (8) ಮೃತರು. ಭಾಗ್ಯಶ್ರೀ (6) ಮತ್ತು ಹರ್ಷಿತಾ (2) ಇಬ್ಬರಿಗೂ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸವಿತಾ ಪತಿ ಮಲ್ಲಿಕಾರ್ಜುನ ಅವರು ಧಾರವಾಡದಲ್ಲಿ ಮಹಾನಗರ ಪಾಲಿಕೆ ಟ್ರಾಕ್ಟರ್‌ ಚಾಲಕರಾಗಿದ್ದಾರೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ. ‘ಸವಿತಾ ಮತ್ತು ಮೂವರು ಪುತ್ರಿಯರನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸವಿತಾ ಅವರು ಸಂಘವೊಂದರಲ್ಲಿ ಸಾಲ ಮಾಡಿದ್ದರು. ಸಾಲಬಾಧೆಯಿಂದ ನೊಂದಿದ್ದರೆಂದು ಗೊತ್ತಾಗಿದೆ’ ಎಂದು ಅವರು ತಿಳಿಸಿದ್ದಾರೆ.

RELATED ARTICLES
spot_img

Latest News