Thursday, August 21, 2025
Homeಬೆಂಗಳೂರುಮಗು ಮಲಗಿದ್ದಾಗಲೇ ಪತ್ನಿ ಕೊಂದು ಪರಾರಿಯಾದ ಪಾಪಿ ಪತಿ

ಮಗು ಮಲಗಿದ್ದಾಗಲೇ ಪತ್ನಿ ಕೊಂದು ಪರಾರಿಯಾದ ಪಾಪಿ ಪತಿ

ಬೆಂಗಳೂರು,ಏ.7- ಮಗು ಮಲಗಿರುವಾಗಲೇ ಪಾಪಿ ಪತಿರಾಯನೊಬ್ಬ ಸೀರೆಯಿಂದ ತನ್ನ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ವೆಂಕಟೇಶನಿಂದ ಪ್ರಾಣ ಕಳೆದುಕೊಂಡ ದುರ್ದೈವಿ ಪತ್ನಿಯನ್ನು ನೇತ್ರಾವತಿ(32) ಎಂದು ಗುರುತಿಸಲಾಗಿದೆ.

ಮೂಲತಃ ಮಾಗಡಿ ತಾಲೂಕಿನವರಾದ ವೆಂಕಟೇಶ್ ಮತ್ತು ನೇತ್ರಾವತಿ ದಂಪತಿ ತಮ್ಮ 9 ವರ್ಷದ ಮಗನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥಪುರದಲ್ಲಿ ವಾಸಿಸುತ್ತಿದ್ದರು.
ವೆಂಕಟೇಶ್ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದು ನಿತ್ಯ ಕುಡಿದು ಬಂದು ಪತ್ನಿ ನೇತ್ರಾವತಿ ಅವರೊಂದಿಗೆ ಜಗಳ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಕುಡಿದು ಬಂದ ವೆಂಕಟೇಶ್ ಕೌಟುಂಬಿಕ ವಿಚಾರ ತೆಗೆದು ಪತ್ನಿಯೊಂದಿಗೆ ಜಗಳ ತೆಗೆದ ಆ ಸಂದರ್ಭದಲ್ಲಿ ಆತನ 9 ವರ್ಷದ ಮಗು ನಿದ್ರಿಸುತ್ತಿದ್ದಾಗ ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮನೆಯಲ್ಲಿ ಮಗು ಅಳುತ್ತಿರುವುದನ್ನು ಕಂಡ ಅಕ್ಕಪಕ್ಕದವರು ಮನೆಗೆ ಬಂದು ನೋಡಿದಾಗ ನೇತ್ರಾವತಿ
ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪರಾರಿಯಾಗಿರುವ ಆರೋಪಿ ವೆಂಕಟೇಶನ ಬಂಧನಕ್ಕೆ ಜಾಲ ಬೀಸಿದ್ದಾರೆ.

RELATED ARTICLES

Latest News