ಮೈಸೂರು,,ಅ.10- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಈ ಬಾರಿ ಅಂಬಾರಿ ಹೊರಲಿರುವ ಆನೆಗಳ ತಾಲೀಮು ಭರದಿಂದ ಸಾಗಿದ್ದು, ಮಳೆಯ ನಡುವೆಯೂ ಕ್ಯಾಪ್ಟನ್ ಅಭಿಮನ್ಯು ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಿದೆ.
ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟಿ ನಗರದ ವಿವಿಧೆಡೆ ತಾಲೀಮುಗಾಗಿ ಅರ್ಚಕರಾದ ಪ್ರಹ್ಲಾದ್‍ರಾವ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಬೇಕೆನ್ನುವಷ್ಟರಲ್ಲಿ ವರುಣನ ಸಿಂಚನವಾಗಿದ್ದು, ಇದೊಂದು ಶುಭ ಸಂಕೇತವೆಂದು ಮಳೆಯ ನಡುವೆಯೇ ಗಜಪಡೆ ತಾಲೀಮು ನಡೆಸಿದವು.
ಉದ್ಯಮಿಗೆ 5.39 ಕೋಟಿ ಪಂಗನಾಮ : ಹೆಚ್ಚು ಲಾಭಕ್ಕಾಗಿ ಹೂಡಿಕೆ ಮಾಡುವ ಮುನ್ನ ಹುಷಾರ್..!
ಅಭಿಮನ್ಯುವಿನ ಬಲ ಹಾಗೂ ಎಡ ಭಾಗದಲ್ಲಿ ಹೆಣ್ಣು ಆನೆಗಳು ಸಾಥ್ ನೀಡಿದರೆ ಹಿಂದೆ ಹನ್ನೊಂದು ಆನೆಗಳು ಹೆಜ್ಜೆ ಹಾಕುತ್ತಾ ನಗರದ ಕೆಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪಕ್ಕೆ ಯಶಸ್ವಿಯಾಗಿ ತಲುಪಿದವು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಮಾವುತರು ಸಹ ಆನೆಗಳೊಂದಿಗೆ ಸಾಗಿದರು.