Tuesday, December 5, 2023
Homeಕ್ರೀಡಾ ಸುದ್ದಿಶತಕ ಸಿಡಿಸಿ ವಿಶಿಷ್ಟ ದಾಖಲೆ ಬರೆದ ಡೇವಿಡ್ ಮಲಾನ್

ಶತಕ ಸಿಡಿಸಿ ವಿಶಿಷ್ಟ ದಾಖಲೆ ಬರೆದ ಡೇವಿಡ್ ಮಲಾನ್

ಧರ್ಮಶಾಲಾ,ಅ.10- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‍ನ ಆರಂಭಿಕ ಆಟಗಾರ ಡೇವಿಡ್ ಮಲಾನ್ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ 8ನೇ ಆಟಗಾರನಾಗಿ ಹೊರಹೊಮ್ಮಿದ ಮಲಾನ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 6ನೇ ಏಕದಿನ ಶತಕ ಕೂಡ ಪೂರೈಸಿದರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಲಾನ್, 91 ಎಸೆತಗಳಲ್ಲೇ 12 ಮನಮೋಹಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿ ಮೂರಂಕಿ ದಾಟುವ ಮೂಲಕ ಭಾರತದಲ್ಲಿ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಶತಕ ಬಾರಿಸಿದ 3ನೇ ಇಂಗ್ಲೆಂಡ್ ಆಟಗಾರ ಎಂಬ ದಾಖಲೆಯನ್ನು ಮಲಾನ್ ನಿರ್ಮಿಸಿದ್ದಾರೆ.

ಪಾಕ್ – ಭಾರತ ಪಂದ್ಯಕ್ಕೆ ರಾಸಾಯನಿಕ ದಾಳಿ ಬೆದರಿಕೆ

1987ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಗ್ರಾಹಂ ಗೂಚ್ 115 ರನ್ ಗಳಿಸಿದ್ದರೆ, 2011ರ ವಿಶ್ವಕಪ್ ಟೂರ್ನಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ವಿರುದ್ಧದ ಪಂದ್ಯದಲ್ಲಿ ಆ್ಯಂಡ್ರೂ ಸ್ಟ್ರಾಸ್ ಸಿಡಿಲಬ್ಬರದ 158 ರನ್ ಗಳಿಸಿದ್ದರು.

ಒಡಿಐ ವಿಶ್ವಕಪ್‍ನಲ್ಲಿ ಶತಕ ಸಿಡಿಸಿದ ಆರಂಭಿಕ ಆಟಗಾರರು:

ಡಿ.ಎಲ್.ಅಮೀಸ್- 137 ರನ್- 1875

  • ಗ್ರಾಹಂ ಗೂಚ್- 115 ರನ್- 1987
  • ಆಂಡ್ರ್ಯೂ ಸ್ಟ್ರಾಸ್- 158 ರನ್- 2011
  • ಮೊಹಿನ್ ಅಲಿ- 128 ರನ್- 2015
  • ಜೇಸನ್ ರಾಯ್- 153 ರನ್- 2019
  • ಜೋ ರೂಟ್- 100- 2019
  • ಜಾನಿ ಬೈರೆಸ್ಟೋವ್- 111 ಹಾಗೂ 116 ರನ್- 2019
  • ಡೇವಿಡ್ ಮಾಲನ್- 140 ರನ್- 2023
RELATED ARTICLES

Latest News