ಶಿಮ್ಲಾ, ಏ. 10 (ಪಿಟಿಐ)- ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪಂಜಾಬ್ನ ಮಾಜಿ ಸಚಿವ ಸುಚಾ ಸಿಂಗ್ ಅವರ ಪುತ್ರ ಸೇರಿದಂತೆ ಐವರನ್ನು 42.89 ಗ್ರಾಂ ಹೆರಾಯಿನ್ನೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಹಳೆ ಬಸ್ ನಿಲ್ದಾಣದ ಪಂಚಾಯತ್ ಘರ್ ಬಳಿಯ ಹೋಟೆಲ್ನ ಕೊಠಡಿಯೊಂದರ ಮೇಲೆ ಪೊಲೀಸ್ ಗಸ್ತು ತಿರುಗುತ್ತಿದ್ದ ತಂಡವು ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಂಜೀವ್ ಕುಮಾರ್ ಗಾಂ„ ಪಿಟಿಐಗೆ ತಿಳಿಸಿದ್ದಾರೆ.
ಪ್ರಮುಖ ಆರೋಪಿಯನ್ನು ಪಂಜಾಬ್ ಮಾಜಿ ಸಚಿವ ಸುಚಾ ಸಿಂಗ್ ಅವರ ಪುತ್ರ ಪ್ರಕಾಶ್ ಸಿಂಗ್ (37) ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳು ಪಂಜಾಬ್ ಮೂಲದ ಅಜಯ್ ಕುಮಾರ್ (27), ಶುಭಂ ಕೌಶಲ್ (26) ಮತ್ತು ಬಲ್ಬಿಂದರ್ (22) ಮತ್ತು ಕಿನ್ನೌರ್ ಜಿಲ್ಲೆಯ ಅಬ್ನಿ (19) ಎಂದು ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಪಂಜಾಬ್ನ ಗುರುದಾಸ್ಪುರದಲ್ಲಿ ಹೆರಾಯಿನ್ ಹೊಂದಿದ್ದ ಮತ್ತು ಸೇವಿಸಿದ್ದಕ್ಕಾಗಿ ಪ್ರಕಾಶ್ ಸಿಂಗ್ ಅವರನ್ನು ಬಂಸಲಾಗಿತ್ತು.