ಬೆಂಗಳೂರು, ಏ.10- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದ ಬಗ್ಗೆ ಆದಿಚುಂಚುನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಏಕೆ ಮಾತನಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೂ, ಧರ್ಮಕ್ಕೂ ಏನು ಸಂಬಂಧ, ಸ್ವಾಮೀಜಿಯವರನ್ನು ಏಕೆ ರಾಜಕೀಯಕ್ಕೆ ಬಳಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ. ಶ್ರೀಗಳನ್ನು ಭೇಟಿ ಮಾಡಿ ಅವರನ್ನು ಬಳಸಿಕೊಳ್ಳುವ ಪ್ರಯತ್ನ ಕಾಂಗ್ರೆಸ್ ಮಾಡಿದೆ, ಜಾತ್ಯತೀತ ಎಂದು ಹೇಳಿಕೊಳ್ಳುವ ಇವರು ಯಾವ ಜಾತ್ಯತೀತರು ಎಂದು ಪ್ರಶ್ನಿಸಿದ್ದಾರೆ.
ಅ„ಕಾರದಲ್ಲಿದ್ದಾಗ ನಾನು ನಮ್ಮ ಸ್ವಾಮೀಜಿ ಅವರನ್ನು ಎಂದೂ ದುರುಪಯೋಗ ಪಡಿಸಿಕೊಳ್ಳವ ಕೆಲಸ ಮಾಡಿಲ್ಲ. ಅ„ಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ, ಜಾತ್ಯತೀತರು ಎಂದು ಹೇಳುವ ಕಾಂಗ್ರೆಸ್ ನವರು ನಿತ್ಯ ಜಾತಿ ಬಗ್ಗೆ ಮಾತನಾಡುತ್ತಾರೆ. ಜನರು ದಡ್ಡರಲ್ಲ. ಸ್ವಾಮೀಜಿ ಅವರನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದರು.
ಬಿಡದಿಯ ತಮ್ಮ ತೋಟದಲ್ಲಿ ಪಾರ್ಟಿ ಮಾಡಿಲ್ಲ. ಹಾಗೆ ಮಾಡುವುದು ಕಾಂಗ್ರೆಸ್ ಸಂಸ್ಕøತಿ. ಯಾವುದೇ ಔತಣ ಕೂಟವಿಲ್ಲ, ನಮ್ಮ ತೋಟದಲ್ಲಿ ಕೆಲಸ ಮಾಡುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ನಮ್ಮ ತೋಟದ ಮನೆಯೇ ನಮಗೆ ಹೆಡ್ ಆಫೀಸ್.ಚುನಾವಣೆ ಸಂದರ್ಭದಲ್ಲಿ ನಾವು ಏನು ಮಾಡಬೇಕು, ಮಾಡಬಾರದು ಎಂಬುದು ಗೊತ್ತಿದೆ. ಪದೇ ಪದೇ ತಹಸೀಲ್ದಾರರಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.