Homeರಾಜ್ಯಕೊಲೆ ಬಳಿಕ ರಕ್ತಸಿಕ್ತ ಆಭರಣ ದೋಚಿದ್ದ ಪಾಪಿ ಶೇಖರ್‌

ಕೊಲೆ ಬಳಿಕ ರಕ್ತಸಿಕ್ತ ಆಭರಣ ದೋಚಿದ್ದ ಪಾಪಿ ಶೇಖರ್‌

ಬೆಂಗಳೂರು,ನ.7- ಕುಟುಂಬದ ಏಳು ಮಂದಿಯನ್ನು ಭೀಕರವಾಗಿ ಕೊಲೆ ಮಾಡಿದ ಪಾಪಿ ಅಳಿಯ ಇಂದುಶೇಖರ್‌ಗೆ ಹಣದ ದಾಹವಿತ್ತು. ಕೊಲೆಯಾದವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಾಜಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣಗೆ ಒಳಪಡಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಕ್ಯಾಬ್‌ ಚಾಲಕನಾಗಿದ್ದ ಆರೋಪಿ ಇಂದುಶೇಖರ್‌ ಪತ್ನಿ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕ ಮೃತರು ಧರಿಸಿದ್ದ ಆಭರಣಗಳನ್ನು ತೆಗೆದುಕೊಂಡಿದ್ದಾನೆ.

ಅತ್ತೆ ಹಾಗೂ ನಾದಿನಿಯರನ್ನು ಕೊಲೆ ಮಾಡಿದ್ದ ಸಂದರ್ಭದಲ್ಲಿ ರಕ್ತಸಿಕ್ತವಾಗಿದ್ದ ಅವರ ಆಭರಣಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಕೆಲವು ಆಭರಣಗಳನ್ನು ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಬಳಸಿಕೊಂಡಿದ್ದಾನೆ.

ಇನ್ನುಳಿದ ಆಭರಣಗಳನ್ನು ತನ್ನ ಜೇಬಿನಲ್ಲೇ ಇಟ್ಟುಕೊಂಡಿದ್ದ. ಆ ಒಡವೆಗಳ ಪೈಕಿ ಕೆಲವೊಂದು ಗಿರವಿಇಟ್ಟು ಆ ಹಣದಲ್ಲಿ ತನ್ನ ಕಾರಿಗೆ ಡೀಸೆಲ್‌ ಹಾಕಿಸಿಕೊಂಡು ಶವಗಳನ್ನು ಸಾಗಿಸಿದ್ದಾನೆ. ಆರೋಪಿ ಇಂದುಶೇಖರ್‌ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಮತ್ತೆ ವಾಪಸ್‌‍ ನಗರಕ್ಕೆ ಬಂದು ಮತ್ತೆ ಬೆಂಗಳೂರಿನಿಂದ ಚೆನ್ನೈಗೆ ಹೋಗಿದ್ದಾನೆ. ತದ ನಂತರ ಮತ್ತೆ ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಪ್ರಯಾಣ ಮಾಡಿದ್ದಾನೆಂದು ಪೊಲೀಸ್‌‍ ತನಿಖೆಯಿಂದ ಗೊತ್ತಾಗಿದೆ.

ಇನ್ನಷ್ಟು ಒಡವೆಗಳನ್ನು ಮಗಳಿಗೆ ಕೊಟ್ಟಿದ್ದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಅಪ್ರಾಪ್ತ ಮಗಳು ತಂದೆ ಹೇಳಿದ ಕೆಲಸ ಮಾಡುತ್ತಿದ್ದೆ ಎಂದಷ್ಟೇ ತಿಳಿಸಿದ್ದಾಳೆ. 12 ದಿನ ಪೊಲೀಸ್‌‍ ವಶಕ್ಕೆ: ಸರಣಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್‌ನನ್ನು ನ್ಯಾಯಾಲಯ 12 ದಿನಗಳ ಕಾಲ ಪೊಲೀಸ್‌‍ ವಶಕ್ಕೆ ನೀಡಿದೆ.

15 ದಿನಗಳ ಅಂತರದಲ್ಲಿ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಮೃತದೇಹಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಬಂದು ತನಗೆ ಏನೂ ಗೊತ್ತಿಲ್ಲದಂತೆ ತನ್ನ ಮನೆಯಲ್ಲಿದ್ದನು.ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಬಲೆಗೆ ಬೀಳಿಸಿಕೊಂಡಿ ರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ವಿಚಾರಣೆ ನಡೆಸಿ ನಂತರ ನ್ಯಾಯಾಲಯ 12 ದಿನಗಳ ಕಾಲ ಪೊಲೀಸ್‌‍ ವಶಕ್ಕೆ ನೀಡಿದೆ.

RELATED ARTICLES

Latest News