ಹಿಂದೂ ಧರ್ಮದಲ್ಲಿ ಪರಮಶಿವನಿಗೆ ಸಂಬಂಧಿಸಿದ ಅನೇಕ ಶಕ್ತಿಯ ಸಂಕೇತಗಳಿವೆ. ಅವುಗಳಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಕುತೂಹಲಕಾರಿ ಸಂಕೇತವೆಂದರೆ ಶಿವನ ಮೂರನೇ ಕಣ್ಣು. ಇದನ್ನು ತ್ರಿನೇತ್ರ ಅಥವಾ ಜ್ಞಾನಚಕ್ಷು (ಜ್ಞಾನದ ಕಣ್ಣು) ಎಂದೂ ಕರೆಯಲಾಗುತ್ತದೆ. ಇದು ದೈವಿಕ ಜ್ಞಾನ, ಪರಮ ಪ್ರಜ್ಞೆ ಹಾಗೂ ದುಷ್ಟಶಕ್ತಿಗಳನ್ನು ನಾಶಪಡಿಸಿ ವಿಶ್ವದಲ್ಲಿ ಶಾಂತಿ ಧರ್ಮ ಮತ್ತು ಸಮತೋಲನವನ್ನು ಪುನಃ ಸ್ಥಾಪಿಸುವ ಶಕ್ತಿಯ ಸಂಕೇತವಾಗಿದೆ.
ಹಿಂದೂ ಪುರಾಣಗಳ ಪ್ರಕಾರ, ಶಿವನ ಮೂರನೇ ಕಣ್ಣು ಕೇವಲ ಸಂಹಾರದ ಸಂಕೇತವಲ್ಲ. ಅದು ಸೃಷ್ಟಿ, ಪರಿವರ್ತನೆ ಹಾಗೂ ಮಾಯೆಯ ಆಚೆಗಿನ ಸತ್ಯವನ್ನು ಕಾಣುವ ದಿವ್ಯ ದೃಷ್ಟಿಯನ್ನೂ ಪ್ರತಿನಿಧಿಸುತ್ತದೆ. ಹಾಗಾದರೆ ಶಿವನಿಗೆ ಈ ಅಸಾಧಾರಣ ಮೂರನೇ ಕಣ್ಣು ಹೇಗೆ ಬಂತು? ಇದಕ್ಕೆ ಹಿಂದೂ ಪುರಾಣಗಳಲ್ಲಿ ಎರಡು ಪ್ರಸಿದ್ಧ ಉಪಕಥೆಗಳಿವೆ.
ಶಿವನ ಮೂರನೇ ಕಣ್ಣು ಏನನ್ನು ಸೂಚಿಸುತ್ತದೆ?
ಶಿವನಿಗೆ ಒಟ್ಟು ಮೂರು ಕಣ್ಣುಗಳಿವೆ. ಪ್ರತಿಯೊಂದು ಕಣ್ಣಿಗೂ ತನ್ನದೇ ಆದ ಸಾಂಕೇತಿಕ ಅರ್ಥವಿದೆ.
ಬಲಗಣ್ಣು: ಸೂರ್ಯನನ್ನು ಪ್ರತಿನಿಧಿಸುತ್ತದೆ. ಇದು ಶಕ್ತಿ, ಕಾರ್ಯಶೀಲತೆ ಹಾಗೂ ಸತ್ಯದ ಸಂಕೇತವಾಗಿದೆ.
ಎಡಗಣ್ಣು: ಚಂದ್ರನನ್ನು ಪ್ರತಿನಿಧಿಸುತ್ತದೆ. ಇದು ಶಾಂತಿ, ಕರುಣೆ ಹಾಗೂ ಪ್ರಶಾಂತತೆಯ ಸಂಕೇತವಾಗಿದೆ.
ಮೂರನೇ ಕಣ್ಣು: ತ್ರಿನೇತ್ರ ಅಥವಾ ಜ್ಞಾನಚಕ್ಷು ಎಂದು ಕರೆಯಲ್ಪಡುವ ಇದು ದೈವಿಕ ಜ್ಞಾನ, ಉನ್ನತ ಪ್ರಜ್ಞೆ ಹಾಗೂ ಆಧ್ಯಾತಿಕ ದೃಷ್ಟಿಯನ್ನು ಪ್ರತಿನಿಧಿಸುತ್ತದೆ.
ಧರ್ಮಕ್ಕೆ ಅಪಾಯ ಎದುರಾ ದಾಗ ಶಿವನ ಮೂರನೇ ಕಣ್ಣು ತೆರೆಯುತ್ತದೆ ಎಂಬ ನಂಬಿಕೆಯಿದೆ. ಆಗ ದುಷ್ಟಶಕ್ತಿಗಳು ಮತ್ತು ನಕಾರಾತಕತೆಯನ್ನು ನಾಶಪಡಿಸಿ ವಿಶ್ವದಲ್ಲಿ ಸಮತೋಲನವನ್ನು ಮರುಸ್ಥಾಪಿಸುತ್ತದೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.
ಪಾರ್ವತಿ ದೇವಿ ಶಿವನ ಕಣ್ಣುಗಳನ್ನು ಮುಚ್ಚಿದಾಗ ಉಂಟಾದ ಮಹಾ ಕತ್ತಲೆ!
ಶಿವನ ಮೂರನೇ ಕಣ್ಣಿನ ಉಗಮಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ ಪೌರಾಣಿಕ ಕಥೆಯೊಂದು ಪಾರ್ವತಿ ದೇವಿಗೆ ಸಂಬಂಧಿಸಿದೆ.ಒಮೆ ಪಾರ್ವತಿ ದೇವಿಯು ತಮಾಷೆಗಾಗಿ ಹಿಂಬದಿಯಿಂದ ಬಂದು ಶಿವನ ಎರಡೂ ಕಣ್ಣುಗಳನ್ನು ತಮ ಕೈಗಳಿಂದ ಮುಚ್ಚಿದರು.ಶಿವನ ಎರಡು ಕಣ್ಣುಗಳು ಸೂರ್ಯ ಮತ್ತು ಚಂದ್ರರನ್ನು ಪ್ರತಿನಿಧಿಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಪಾರ್ವತಿ ದೇವಿಯು ಶಿವನ ಕಣ್ಣುಗಳನ್ನು ಮುಚ್ಚಿದ ತಕ್ಷಣ ಇಡೀ ವಿಶ್ವವೇ ಕತ್ತಲಲ್ಲಿ ಮುಳುಗಿತು. ಸೂರ್ಯನ ಬೆಳಕು ಮಾಯವಾಯಿತು, ಚಂದ್ರನ ಪ್ರಕಾಶವೂ ಇಲ್ಲದಂತಾಯಿತು. ಜಗತ್ತಿನ ಜೀವಿಗಳು ಕತ್ತಲಿನಿಂದ ತತ್ತರಿಸಿದವು.
ಸೃಷ್ಟಿಯ ಸಮತೋಲ ನವೇ ಹದಗೆಡುವ ಪರಿಸ್ಥಿತಿ ನಿರ್ಮಾಣ ವಾಯಿತು. ಆಗ ಲೋಕದ ರಕ್ಷಣೆಗಾಗಿ ಶಿವನ ಹಣೆಯ ಮಧ್ಯಭಾಗದಲ್ಲಿ ಅಗ್ನಿಯಂತೆ ಪ್ರಕಾಶಿಸುವ ಮೂರನೇ ಕಣ್ಣು ಉದಯಿಸಿತು.ಆ ಕಣ್ಣಿನಿಂದ ಹೊರಹೊಮಿದ ದಿವ್ಯ ಜ್ಯೋತಿ ಇಡೀ ವಿಶ್ವಕ್ಕೆ ಮತ್ತೆ ಬೆಳಕನ್ನು ನೀಡಿತು. ಹೀಗೆ ಶಿವನು ತ್ರಿನೇತ್ರನಾದನು ಎಂದು ಈ ಪೌರಾಣಿಕ ಕಥೆ ತಿಳಿಸುತ್ತದೆ.
ಈ ಕಥೆಯು ಶಿವನ ಮೂರನೇ ಕಣ್ಣು ವಿಶ್ವದ ಸಮತೋಲನ ಮತ್ತು ಜೀವಜಗತ್ತಿನ ರಕ್ಷಣೆಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸಾರುತ್ತದೆ.
ಮುಂದುವರಿಯುವುದು…
