Homeರಾಷ್ಟ್ರೀಯಮಧ್ಯಪ್ರದೇಶ : ಮೂರು ಅಂತಸ್ತಿನ ಮನೆಯಲ್ಲಿ ಭೀಕರ ಅಗ್ನಿ ಅವಘಡ : ಒಂದೇ ಕುಟುಂಬದ 6...

ಮಧ್ಯಪ್ರದೇಶ : ಮೂರು ಅಂತಸ್ತಿನ ಮನೆಯಲ್ಲಿ ಭೀಕರ ಅಗ್ನಿ ಅವಘಡ : ಒಂದೇ ಕುಟುಂಬದ 6 ಮಂದಿ ಸಾವು

ಸಿಯೋನಿ, ನ.9- ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬರ ಮೂರು ಅಂತಸ್ತಿನ ಮನೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.

ಮುಂಜಾನೆ 4ರಿಂದ 4.30ರ ನಡುವಿನ ಸಮಯದಲ್ಲಿ ಛಪಾರಾ ಪಟ್ಟಣದ ಮಹಾವೀರ್‌ ವಾರ್ಡ್‌ನ ಜೈನ ಮಂದಿರದ ಸಮೀಪದಲ್ಲಿರುವ ಚಿನ್ನಾಭರಣ ವ್ಯಾಪಾರಿ ಕುಂದನ್‌ ಲಾಲ್‌ ಸೋನಿ ಅವರ ಮನೆಯಲ್ಲಿ ಈ ದುರಂತ ಸಂಭವಿಸಿದೆ.

ಮೃತರನ್ನು ಕುಂದನ್‌ ಲಾಲ್‌ ಸೋನಿ (75), ಅವರ ಪತ್ನಿ ರಾಜಕುಮಾರಿ ಸೋನಿ (65), ರಿತು ಸೋನಿ (42), ಸ್ಮೃತಿ ಸೋನಿ (40), ಸೂರ್ಯ ಸೋನಿ (45) ಹಾಗೂ ಆದಿತ್ಯ ಸೋನಿ (16) ಎಂದು ಗುರುತಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಒಟ್ಟು 10 ಮಂದಿ ಇದ್ದರು. ಅವರಲ್ಲಿ ಆರು ಮಂದಿ ಬೆಂಕಿಗೆ ಆಹುತಿಯಾಗಿದ್ದು, ಉಳಿದ ನಾಲ್ವರನ್ನು ರಕ್ಷಿಸಲಾಗಿದೆ ಎಂದು ಸ್ಥಳದಲ್ಲಿದ್ದ ಉಪ ಪೊಲೀಸ್‌ ವರಿಷ್ಠಾಧಿಕಾರಿ ಅಪೂರ್ವ ಭಲಾವಿ ತಿಳಿಸಿದ್ದಾರೆ.

ಬಳಿಕ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ ಎಂದು ಅವರು ಹೇಳಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಯಗೊಂಡಿರುವ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES

Latest News