Friday, November 22, 2024
Homeರಾಷ್ಟ್ರೀಯ | National931 ಕೋಟಿ ಆಸ್ತಿ ಒಡೆಯ ಚಂದ್ರಬಾಬು ನಾಯ್ಡು

931 ಕೋಟಿ ಆಸ್ತಿ ಒಡೆಯ ಚಂದ್ರಬಾಬು ನಾಯ್ಡು

ಹೈದರಾಬಾದ್, ಏ.20- ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಅವರ ಪತ್ನಿ ನಾರಾ ಭುವನೇಶ್ವರಿ ಅವರು ತಮ್ಮ ಒಟ್ಟು ಚರ ಮತ್ತು ಸ್ಥಿರ ಆಸ್ತಿ ಮೌಲ್ಯ ರೂ.931.83 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಚಿತ್ತೂರು ಜಿಲ್ಲೆಯ ಕುಪ್ಪಂ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಅಫಿಡವಿಟ್‍ನಲ್ಲಿ ನಾಯ್ಡು ಅವರು ಇದನ್ನು ಬಹಿರಂಗಪಡಿಸಿದ್ದಾರೆ.

ಕುಪ್ಪಂ ಪುರಸಭೆ ಕಚೇರಿಯಲ್ಲಿ ಮಧ್ಯಾಹ್ನ ಟಿಡಿಪಿ ಕಾರ್ಯಕರ್ತರ ಬೃಹತ್ ರ್ಯಾಲಿ ನಡೆಸಿದ ನಂತರ ಭುವನೇಶ್ವರಿ ಅವರು ತಮ್ಮ ಪತಿ ಪರವಾಗಿ ನಾಮಪತ್ರ ಸಲ್ಲಿಸಿದರು.ನಾಯ್ಡು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 1994ರ ಅಂಬಾಸಿಡರ್ ಕಾರು ರೂ. 2.25 ಲಕ್ಷ ಮೌಲ್ಯದ ಜೊತೆಗೆ ಕೈಯಲ್ಲಿ ರೂ.11,560 ನಗದು ಮತ್ತು ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಸೇರಿದಂತೆ ಒಟ್ಟು ರೂ. 4,80,438 ಮೌಲ್ಯದ ಚರ ಆಸ್ತಿಯನ್ನು ಹೊಂದಿದ್ದಾರೆ.

ಆದರೆ, ಅವರ ಪತ್ನಿ ಭುವನೇಶ್ವರಿ ಅವರ ಚರ ಆಸ್ತಿ ಮೌಲ್ಯ ರೂ.810.37 ಕೋಟಿಗೂ ಹೆಚ್ಚು. ಈ ಸ್ವತ್ತುಗಳು ಹೆರಿಟೇಜ್ -ಫಾಡ್ಸ್‍ನ 2,26,11,525 ಷೇರುಗಳನ್ನು ಒಳಗೊಂಡಿದ್ದು, ಪ್ರತಿ ಷೇರಿನ ಬೆಲೆ ರೂ.337.85, ಒಟ್ಟು ಮೌಲ್ಯ ರೂ.763.93 ಕೋಟಿ, ಜೊತೆಗೆ 3,435 ಗ್ರಾಂ ಚಿನ್ನ, 41.49 ಕೆಜಿ ಬೆಳ್ಳಿ ಮತ್ತು ಅಮೂಲ್ಯ ಕಲ್ಲುಗಳು ಮತ್ತು ರೂ.1.09 ಕೋಟಿ ಮೌಲ್ಯದ ಮುತ್ತುಗಳು ಇವೆ.

ಸ್ಥಿರಾಸ್ತಿಗೆ ಸಂಬಂಧಿಸಿದಂತೆ, ನಾಯ್ಡು ಅವರು ಕುಪ್ಪಂನ ಶಾಂತಿಪುರಂನ ಕಡಪಲ್ಲಿ ಗ್ರಾಮದಲ್ಲಿ 95.23 ಸೆಂಟ್ಸ್ ಭೂಮಿಯನ್ನು ಹೊಂದಿದ್ದು, ಅಲ್ಲಿ ಅವರು ಮನೆಯನ್ನು ನಿರ್ಮಿಸುತ್ತಿದ್ದಾರೆ, ಅದರ ಮಾರುಕಟ್ಟೆ ಮೌಲ್ಯ ಸುಮಾರು ರೂ.77.33 ಲಕ್ಷ ಮತ್ತು ಅವರ ಮಗ ನಾರಾ ಲೋಕೇಶ್ ಅವರ ಸಹಭಾಗಿತ್ವದಲ್ಲಿ ಹೈದರಾಬಾದ್‍ನ ಜುಬಿಲಿ ಹಿಲ್ಸ್‍ನಲ್ಲಿ 1,225 ಚದರ ಗಜ ಭೂಮಿಯಲ್ಲಿ 14,950 ಚದರ ಅಡಿ ವಿಸ್ತೀರ್ಣದ ವಸತಿ ಕಟ್ಟಡವನ್ನು ನಿರ್ಮಿಸಲಾಗಿದೆ. ಜಮೀನು ಮತ್ತು ಮನೆಯ ಒಟ್ಟು ಮೌಲ್ಯ ರೂ.70.20 ಕೋಟಿ ಆಗಿದ್ದು, ಅದರಲ್ಲಿ ಅರ್ಧದಷ್ಟು ಅವರ ಮಗನದ್ದಾಗಿದೆ.

RELATED ARTICLES

Latest News