Sunday, November 24, 2024
Homeಬೆಂಗಳೂರುವಿಜೃಂಭಣೆಯ ಹಸಿ ಕರಗ ಮಹೋತ್ಸವ

ವಿಜೃಂಭಣೆಯ ಹಸಿ ಕರಗ ಮಹೋತ್ಸವ

ಬೆಂಗಳೂರು, ಏ.21- ಐತಿಹಾಸಿಕ ಕರಗ ಉತ್ಸವದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಂಪಂಗಿ ಕೆರೆಯಂಗಳದಲ್ಲಿ ನಸುಕಿನ ಜಾವ ರಾತ್ರಿ 3 ಗಂಟೆ ಸಮಯದಲ್ಲಿ ಹಸಿ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಈಗಾಗಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದ್ದು, ಏ.23ರ ಚೈತ್ರ ಪೌರ್ಣಮಿಯಂದು ರಾತ್ರಿ 12.30ಕ್ಕೆ ಕರಗ ಶಕ್ತ್ಯೋತ್ಸವ ನಡೆಯಲಿದ್ದು, 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಏ.24ರಂದು ದೇವಸ್ಥಾನದಲ್ಲಿ ಗಾವು ಪೂಜೆ, 25ಕೆಕ್ಕೆ ಕೊನೆಯ ದಿನದ ವಸಂತೋತ್ಸವ ಧ್ವಜಾವರೋಹಣ ಕಾರ್ಯಕ್ರಮ ನಡೆಯಲಿದೆ.

ಈ ವರ್ಷ ಸುಮಾರು 3000 ವೀರ ಕುಮಾರರು ಕರಗದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾಧಾರಣವಾಗಿ ಆಚರಿಸ ಲಾಗಿದ್ದ ಕರಗವನ್ನು ಈ ಬಾರಿ ಅದ್ಧೂರಿ ಯಾಗಿ ಆಚರಿಸಲಾಗುವುದು. ಕರಗದ ದಿನ ರಾತ್ರಿ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಲಾಗುತ್ತದೆ. ನಡುರಾತ್ರಿ ವೇಳೆಗೆ ಕಳಶದ ಆಕೃತಿಗೆ ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿ ಕರಗ ಸಿದ್ಧಪಡಿಸಲಾಗುತ್ತದೆ. ಸಂಪಗಿರಾಮನಗರದ ಬಳಿಯಿಂದ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಕರಗದ ಮೆರವಣಿಗೆ ಸಾಗುವ ದಾರಿಯು ದ್ದಕ್ಕೂ ರಂಗೋಲಿ ಹಾಕಲಾಗುತ್ತದೆ. ಮನೆ ತಳಿರುತೋರಣಗಳಿಂದ ಶೃಂಗಾರವಾಗಿ ರುತ್ತವೆ. ತಿಗಳರ ಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಸ್ಥಾನಗಳಲ್ಲಿ ಕರಗಧಾರಿಗಳು ಸಂಚರಿಸಿ ಸೂರ್ಯೋದಯದ ವೇಳೆಗೆ ಧರ್ಮರಾಯಸ್ವಾಮಿ ಗುಡಿಗೆ ಬರುತ್ತಾರೆ.

ಕರಗಧಾರಿಗಳು ಮೊದಲು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡು ತ್ತಾರೆ. ಇದು ಭಾವೈಕ್ಯತೆಯ ಸಂಕೇತದ ಪ್ರತೀಕವಾಗಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೇಳಿದ್ದಾರೆ.

RELATED ARTICLES

Latest News