Saturday, May 4, 2024
Homeಕ್ರೀಡಾ ಸುದ್ದಿಟಿ -20 ವಿಶ್ವಕಪ್ : ಐರ್ಲೆಂಡ್, ಸ್ಕಾಟ್ಲೆಂಡ್‌ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ

ಟಿ -20 ವಿಶ್ವಕಪ್ : ಐರ್ಲೆಂಡ್, ಸ್ಕಾಟ್ಲೆಂಡ್‌ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ

ಬೆಂಗಳೂರು, ಏ.21- ಸರ್ಕಾರಿ ಸ್ವಾಮ್ಯದ ನಂದಿನಿ ಬ್ರಾಂಡ್ ಹೆಸರಿರುವ ಸಹಕಾರಿ ಡೇರಿ ಒಕ್ಕೂಟವಾದ ಕರ್ನಾಟಕ ಹಾಲು ಒಕ್ಕೂಟವು ಮುಂಬರುವ 2024ರ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ವಹಿಸಲಿದೆ.

ಹೌದು, ನಾವು ಆ ತಂಡಗಳನ್ನು ಪ್ರಾಯೋಜಿಸುತ್ತಿದ್ದೇವೆ. ಅವರು ಪಂದ್ಯಗಳಲ್ಲಿ ನಮ್ಮ ಬ್ರ್ಯಾಂಡ್ಅನ್ನು ಪ್ರದರ್ಶಿಸಲಿದ್ದಾರೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ನಂದಿನಿಯನ್ನು ಒಂದು ಜಾಗತಿಕ ಉತ್ಪನ್ನವಾಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ನಾವು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಮ್ಮ ಮಳಿಗೆಗಳನ್ನು ತೆರೆದಿದ್ದೇವೆ. ಸಿಂಗಪೂರ್ನಲ್ಲಿಯೂ ನಮ್ಮ ಮಳಿಗೆಗಳಿವೆ. ನಾವು ಅಮೆರಿಕದಲ್ಲಿ ನಂದಿನಿಯ ಸಿಹಿ ತಿನಿಸುಗಳನ್ನು ವಿಕ್ರಯ ಮಾಡುತ್ತಿದ್ದೇವೆ ಎಂದು ಜಗದೀಶ್ ವಿವರಿಸಿದ್ದಾರೆ.

RELATED ARTICLES

Latest News