ಬೆಂಗಳೂರು,ನ.18- ರಾಜ್ಯಸರ್ಕಾರ ಗೃಹ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ಭಾರೀ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ ಬೆಂಗಳೂರು ನಗರದಲ್ಲಿ ಹೊಸದಾಗಿ ಸೃಷ್ಟಿಸಲಾದ ಆಯುಕ್ತರ ಹಾಗೂ ಉಪ ಆಯುಕ್ತರ ಹುದ್ದೆಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ರಾಜ್ಯ ಅಗ್ನಿಶಾಮಕ ಹಾಗೂ ತುರ್ತುಸೇವಾ ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಯನ್ನು ನಗರ ಮುಖ್ಯ ಪೊಲೀಸ್ ಆಯುಕ್ತರ ಹುದ್ದೆಗೆ ಮೇಲ್ದರ್ಜೆಗೇರಿಸಿದ್ದು, ಈ ಹುದ್ದೆಗೆ ಎಡಿಜಿಪಿ ಆರ್.ಹಿತೇಂದ್ರ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ವಿಜಯ್ಕುಮಾರ್ ಸಿಂಗ್ ಅವರನ್ನು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಹುದ್ದೆಗೆ, ಎಸ್.ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಈ ಹುದ್ದೆಯಲ್ಲಿದ್ದ ಮನೀಶ್ ಖರ್ಬಿಕಾರ್ ಅವರನ್ನು ವರ್ಗಾಯಿಸಲಾಗಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಸಂಚಾರ ವಿಭಾಗದ ನಗರ ಪೊಲೀಸ್ ಆಯುಕ್ತ ಹುದ್ದೆ ನೀಡಿದ್ದು, ಜೊತೆಗೆ ರೌಡಿ ನಿಗ್ರಹಪಡೆಯ ಆಯುಕ್ತರ ಜವಾಬ್ದಾರಿಯನ್ನು ವಹಿಸಲಾಗಿದೆ.
ಮನೀಶ್ ಕಾರಿಬಿಕಾರ್ ಅವರಿಗೆ ನಗರದ ಸಂವಹನ, ಲಾಜಿಸ್ಟಿಕ್್ಸ ಮತ್ತು ಆಧುನೀಕರಣದ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದ್ದು, ಈ ಹುದ್ದೆಯಲ್ಲಿದ್ದ ಎಸ್.ಮುರುಗನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಲಾಬುರಾಮ್ ಅವರಿಗೆ ಹೊಸದಾಗಿ ಸೃಷ್ಟಿಸಿರುವ ಬೆಂಗಳೂರು ನಗರ ಕೇಂದ್ರ ಆಯುಕ್ತರ ಹುದ್ದೆಯನ್ನು ನೀಡಲಾಗಿದೆ. ಡಾ.ಪಿ.ಎಸ್.ಹರ್ಷ ಅವರಿಗೆ ಬೆಂಗಳೂರು ನಗರ ಪೂರ್ವ ಪೊಲೀಸ್ ಆಯುಕ್ತರ ಹುದ್ದೆ ನೀಡಲಾಗಿದೆ.
ವಿಕಾಸ್ ಕುಮಾರ್ ವಿಕಾಸ್ ಅವರಿಗೆ ಬೆಂಗಳೂರು ನಗರ ಪಶ್ಚಿಮ ಪೊಲೀಸ್ ಆಯುಕ್ತರ ಹುದ್ದೆ ನೀಡಲಾಗಿದೆ. ಹುದ್ದೆ ನಿರೀಕ್ಷೆಯಲ್ಲಿದ್ದ ಎನ್.ಶಶಿಕುಮಾರ್ ಅವರನ್ನು ಬೆಂಗಳೂರು ನಗರ ಪಶ್ಚಿಮ ವಲಯದ ಐಜಿಪಿ (ಮಂಗಳೂರು) ಹುದ್ದೆ ನೀಡಲಾಗಿದೆ. ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಬೆಂಗಳೂರು ನಗರ ಉತ್ತರ ಪೊಲೀಸ್ ಆಯುಕ್ತರ ಹುದ್ದೆ ನೀಡಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಅನುಪಮ್ ಅಗರ್ವಾಲ್ ಅವರಿಗೆ ಕರ್ನಾಟಕ ರಾಜ್ಯ ಮೀಸಲು ಪಡೆಯ ಪೊಲೀಸ್ ಪಡೆಯ ಐಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. ಈ ಹುದ್ದೆಯಲ್ಲಿದ್ದ ಅಮಿತ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಡಾ.ಶರಣಪ್ಪ ಎಸ್.ಡಿ. ಅವರನ್ನು ಪೊಲೀಸ್ ಇಲಾಖೆಯ ಡಿಐಜಿ ಹುದ್ದೆಗೆ ವರ್ಗಾಯಿಸಿದ್ದು, ಈ ಹುದ್ದೆಯಲ್ಲಿದ್ದ ಜೆ.ಕೆ.ರಶಿ ಅವರನ್ನು ವರ್ಗಾಯಿಸಲಾಗಿದೆ.
ಸಿ. ವಂಶಿಕೃಷ್ಣ ಅವರಿಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರ (ಆಡಳಿತ) ಹುದ್ದೆ ನೀಡಲಾಗಿದೆ. ಜೊತೆಗೆ ಹೊಸದಾಗಿ ಸೃಷ್ಟಿಸಿರುವ ಬೆಂಗಳೂರು ನಗರ ದಕ್ಷಿಣ ಪೊಲೀಸ್ ಆಯುಕ್ತರ ಹುದ್ದೆಯ ಹೊಣೆಗಾರಿಕೆಯನ್ನು ನೀಡಲಾಗಿದೆ.
ಕುಲ್ದೀಪ್ಕುಮಾರ್ ಆರ್.ಜೈನ್ ಅವರನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಿದ್ದು, ಈ ಹುದ್ದೆಯಲ್ಲಿದ್ದ ಡಾ.ಶರಣಪ್ಪ ಅವರನ್ನು ವರ್ಗಾಯಿಸಲಾಗಿದೆ. ಎಂ.ಪುಟ್ಟಮಾದಯ್ಯ ಅವರನ್ನು ದಕ್ಷಿಣ ವಲಯ ಡಿಐಜಿ ಹುದ್ದೆಗೆ ವರ್ಗಾಯಿಸಲಾಗಿದೆ. ಈ ಹುದ್ದೆಯಲ್ಲಿದ್ದ ಬೋರಲಿಂಗಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ.
ಡಾ.ಎಂ.ಅಶ್ವಿನಿ ಅವರನ್ನು ಬೆಂಗಳೂರಿನ ಡಿಐಜಿ (ನೇಮಕಾತಿ) ಹುದ್ದೆಗೆ, ಜೆ.ಕೆ.ರಶಿ ಅವರನ್ನು ಜಲಸಂಪನೂಲ ಇಲಾಖೆಯ ಡಿಐಜಿ (ಜಾಗೃತ ದಳ) ಹುದ್ದೆಗೆ, ಡಾ.ಅನೂಪ್ ಎ. ಶೆಟ್ಟಿ ಅವರನ್ನು ಬೆಂಗಳೂರು ನಗರ ಪೂರ್ವ ವಲಯದ (ಸಂಚಾರ) ಉಪ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
ಲಕ್ಷ್ಮಣ್ ನಿಂಬರ್ಗಿ ಅವರನ್ನು ಬೆಂಗಳೂರು ನಗರ ಕೇಂದ್ರ ಡಿಸಿಪಿ (ಶಸಾ್ತ್ರಸ್ತ್ರ ಮೀಸಲು ಪಡೆ) ಹುದ್ದೆಗೆ, ಚನ್ನಬಸವಣ್ಣ ಲಂಗೋಟಿ ಅವರನ್ನು ಬೆಂಗಳೂರು ಕೇಂದ್ರದ ಡಿಸಿಪಿ ಹುದ್ದೆಗೆ, ನಾಗೇಶ್ ಡಿ.ಎಲ್. ಅವರನ್ನು ಬೆಂ. ನಗರ ಉತ್ತರ ಡಿಸಿಪಿ ಹುದ್ದೆಗೆ ವರ್ಗಾಯಿಸಲಾಗಿದೆ.
ಲೋಕೇಶ್ ಭರಮಪ್ಪ ಜಗಲಸರ್ ಅವರನ್ನು ಬೆಂ. ನಗರ ಕೇಂದ್ರ ಡಿಸಿಪಿ ಹುದ್ದೆ (ಸಂಚಾರ), ಯತೀಶ್ ಎನ್. ಅವರನ್ನು ಪಶ್ಚಿಮ ಬೆಂಗಳೂರು ಡಿಸಿಪಿ ಹುದ್ದೆಗೆ (ನೈರುತ್ಯ), ಸೈದುಲ್ಲಾ ಅದಾವತ್ ಅವರನ್ನು ಬೆಂ. ಆಂತರಿಕ ಭದ್ರತಾ ವಿಭಾಗದ ಎಸ್ಪಿ ಹುದ್ದೆಗೆ, ಶ್ರೀಹರಿಬಾಬು ಬಿ.ಎಲ್. ಅವರನ್ನು ಬೆಂ.ನಗರ ಪೂರ್ವ ಡಿಸಿಪಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಡಾ.ಗೀತಾ ಎಂ.ಎಸ್. ಅವರನ್ನು ಬೆಂ. ನಗರ ಪೂರ್ವ ಡಿಸಿಪಿ ಹುದ್ದೆಗೆ, ರಂಜಿತ್ ಕುಮಾರ್ ಬಂಡಾರೂ ಅವರನ್ನು ಬೆಂ. ನಗರ ಡಿಸಿಪಿ (ಆಡಳಿತ) ಹುದ್ದೆಗೆ, ಅಶೋಕ್ ಕೆ.ವಿ. ಅವರನ್ನು ಬೆಂ. ನಗರ ಪಶ್ಚಿಮ ವಲಯದ ಡಿಸಿಪಿ ಹುದ್ದೆಗೆ, ಅಮಾಠೆ ವಿಕ್ರಮ್ ಅವರನ್ನು ಬೆಂ. ನಗರ ಉತ್ತರ ಡಿಸಿಪಿ ಹುದ್ದೆಗೆ, ಲಕ್ಷ್ಮೀ ಗಣೇಶ್ ಕೆ. ಅವರನ್ನು ಬೆಂ.ನಗರ ಕೇಂದ್ರ ಡಿಸಿಪಿ ಹುದ್ದೆಗೆ, ಪಿ.ವಿ.ಸ್ನೇಹಾ ಅವರನ್ನು ಬೆಂ.ನಗರ ಪಶ್ಚಿಮ ವಲಯದ ಡಿಸಿಪಿ ಹುದ್ದೆಗೆ (ಸಂಚಾರ) ವರ್ಗಾವಣೆ ಮಾಡಲಾಗಿದೆ.
