Monday, May 19, 2025
Homeಬೆಂಗಳೂರುಪಾನಿಪೂರಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ

ಪಾನಿಪೂರಿ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು, ಏ.26- ಪಾನಿಪೂರಿ ಕೊಡಿಸುವುದಾಗಿ 8 ವರ್ಷದ ಬಾಲಕಿಗೆ ಆಸೆ ಹುಟ್ಟಿಸಿ ಕರೆದೊಯ್ದ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘೋರ ಘಟನೆ ಅಶೋಕನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ತುತ್ತಿನ ಚೀಲ ತುಂಬಿಸಿಕೊಳ್ಳಲು ತಾಯಿ ತನ್ನ 8 ವರ್ಷದ ಮಗಳನ್ನು ತನ್ನ ಜೊತೆ ಕರೆದುಕೊಂಡು ಮೆಗ್ರತ್‌ ರೋಡ್‌ನಲ್ಲಿರುವ ಪ್ರತಿಷ್ಠಿತ ಮಾಲ್‌ವೊಂದರ ಬಳಿ ಬಲೂನ್‌ ಮಾರುತ್ತಿದ್ದರು. ಬಾಲಕಿಯ ತಾಯಿ ಮೂಕರಾಗಿದ್ದಾರೆ.ಇಲ್ಲಿನ ಮುಖ್ಯರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಹಿಟಾಚಿ ವಾಹನ ಸ್ಥಳದಲ್ಲಿ ನಿಲ್ಲಿಸಲಾಗಿತ್ತು.

ರಾತ್ರಿ 54 ವರ್ಷದ ಕಾಮುಕನೊಬ್ಬ ಇವರ ಬಳಿ ಬಂದು ಬಾಲಕಿಯನ್ನು ಗಮನಿಸಿ ಪಾನಿಪೂರಿ ಕೊಡಿಸುವುದಾಗಿ ಬಾಲಕಿಗೆ ಆಸೆ ಹುಟ್ಟಿಸಿದ್ದಾನೆ.ಆತನೊಂದಿಗೆ ಬಾಲಕಿ ಹೋದಾಗ ಆತ ಹಿಟಾಚಿ ವಾಹನದ ಕೆಳಗೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.

ಬಾಲಕಿಗೆ ರಕ್ತಸ್ರಾವವಾಗಿರುವುದನ್ನು ಗಮನಿಸಿದ ತಾಯಿ ತನ್ನ ಮೂಕಭಾಷೆಯಲ್ಲೇ ವಿಚಾರಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಅಶೋಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News