Sunday, December 1, 2024
Homeರಾಜಕೀಯ | Politicsತಲಾ ಒಂದು ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್‌ ಕರಪತ್ರ ಹಂಚಿಕೆ : ದೂರು ನೀಡಲು ಮುಂದಾದ...

ತಲಾ ಒಂದು ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್‌ ಕರಪತ್ರ ಹಂಚಿಕೆ : ದೂರು ನೀಡಲು ಮುಂದಾದ ದೇವೇಗೌಡರು

ಹಾಸನ,ಏ.26- ಯುವಕರಿಗೆ ಹಾಗೂ ಮಹಿಳೆಯರಿಗೆ ತಲಾ ಒಂದು ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್‌ ಕರಪತ್ರ ಪ್ರಕಟಿಸಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಿಳಿಸಿದರು.

ಪಡುವಲಹಿಪ್ಪೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಹಾಗೂ ಮಹಿಳೆಯರಿಗೆ ತಲಾ ಒಂದು ಲಕ್ಷ ಕೊಡುವುದಾಗಿ ಪಾಂಪ್ಲೆಟ್‌ ಪ್ರಕಟಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸ್ಟೇಟಸ್‌ ಏನು ಎಂದು ಪ್ರಶ್ನಿಸಿದರು.

ಇವರೇನು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಉಪಮುಖ್ಯಮಂತ್ರಿ ಆಗಿದ್ದಾರೆಯೇ? ಒಂದು ವೇಳೆ ಈ ಸ್ಥಾನಗಳಲ್ಲಿ ಅವರಿದ್ದರ ಆ ರೀತಿಯ ಪ್ರಚಾರವನ್ನು ಒಪ್ಪಬಹುದಿತ್ತು ಎಂದರು.

ನೆರೆಯ ಕೇರಳ, ತಮಿಳುನಾಡಿನಲ್ಲಿ ಇಲ್ಲದ ಈ ರೀತಿಯ ಭರವಸೆಯ ಪ್ರಕಟಣೆ ಕರ್ನಾಟಕದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಹೇಳಿದರು.

RELATED ARTICLES

Latest News